ಕರ್ನಾಟಕ

karnataka

ETV Bharat / bharat

''ಅವರು ವೆಂಟಿಲೇಟರ್ ಸ್ವಿಚ್​​ ಕಿತ್ತರು, ನನಗೆ ಉಸಿರಾಡಲಾಗುತ್ತಿಲ್ಲ ಡ್ಯಾಡಿ'': ಸಾಯುವ ಮುನ್ನ ಸೋಂಕಿತನ ಸೆಲ್ಫಿ ವಿಡಿಯೋ - youth died by corona

ಹೈದರಾಬಾದ್​ನ ಆಸ್ಪತ್ರೆಯೊಂದರಲ್ಲಿ ಕೋವಿಡ್​ ಸೋಂಕಿನಿಂದ ಮೃತಪಟ್ಟ ಯುವಕನೊಬ್ಬ ಸಾಯುವ ಕೆಲವೇ ನಿಮಿಷಗಳ ಮುನ್ನ ಸೆಲ್ಫಿ ವಿಡಿಯೋವೊಂದನ್ನು ಮಾಡಿ ತಂದೆಗೆ ಕಳಿಸಿದ್ದಾನೆ. ಈ ವಿಡಿಯೋದಲ್ಲಿ ಆಸ್ಪತ್ರೆಯಲ್ಲಿ ಯಾರೋ ತನ್ನ ವೆಂಟಿಲೇಟರ್​​ ಸ್ವಿಚ್​​ ಅನ್ನು ತೆಗೆದರು, ನನಗೆ ಉಸಿರಾಡುಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾನೆ.

COVID
ಸೆಲ್ಫಿ ವಿಡಿಯೋ

By

Published : Jun 29, 2020, 11:51 AM IST

Updated : Jun 29, 2020, 12:23 PM IST

ಹೈದರಾಬಾದ್​​: ಕೋವಿಡ್ -19 ಗೆ ಬಲಿಯಾಗುವ ಕೆಲವೇ ನಿಮಿಷಗಳ ಮೊದಲು ಹೈದರಾಬಾದ್‌ನ 26 ವರ್ಷದ ಯುವಕನೊಬ್ಬ ಆಸ್ಪತ್ರೆಯ ಬೆಡ್​ನಿಂದಲೇ ತಂದೆಗೆ ಸೆಲ್ಫಿ ವಿಡಿಯೋ ಕಳುಹಿಸಿದ್ದಾನೆ.

ಈ ವಿಡಿಯೋದಲ್ಲಿ ಯಾರೋ ವೆಂಟಿಲೇಟರ್ ಸ್ವಿಚ್​​ ತೆಗೆದರು. ಬಳಿಕ ನನಗೆ ಸರಿಯಾಗಿ ಉಸಿರಾಡಲು ಆಗುತ್ತಿಲ್ಲ ಅಂತ ತಿಳಿಸಿದ್ದಾನೆ. ಕಳೆದ ಶುಕ್ರವಾರ ರಾತ್ರಿ ಹೈದರಾಬಾದ್‌ನ ಎರ್ರಗಡ್ಡಾದಲ್ಲಿರುವ 'ಸರ್ಕಾರಿ ಚೆಸ್ಟ್​​ ಆಸ್ಪತ್ರೆ'ಯ ವಾರ್ಡ್​​ವೊಂದರಲ್ಲಿ ಈ ಘಟನೆ ನಡೆದಿದೆ. ಆದರೆ ಯುವಕನ ಈ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ನಿನ್ನೆ ಈ ಘಟನೆ ಬೆಳಕಿಗೆ ಬಂದಿದೆ.

ವಿಡಿಯೋದಲ್ಲಿ ಈತ "ಅವರು ವೆಂಟಿಲೇಟರ್ ತೆಗೆದಿದ್ದಾರೆ. ಕಳೆದ ಮೂರು ಗಂಟೆಗಳಿಂದ ನನಗೆ ಆಕ್ಸಿಜನ್​ ನೀಡಿ ಎಂದು ಕೇಳಿಕೊಂಡ್ರೂ ನನ್ನ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ'' ಎಂದು ಮೃತ ಯುವಕ ಹೇಳಿದ್ದಾನೆ. ನನ್ನ ಹೃದಯಬಡಿತ ನಿಂತುಹೋಗಿದೆ, ಶ್ವಾಸಕೋಶಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ.... ಬೈ ಡ್ಯಾಡಿ.... ಎಲ್ಲರಿಗೂ ಬೈ ಎಂದು ಹೇಳಿದ್ದಾನೆ.

ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ ಕೊರೊನಾ ಸೋಂಕಿತ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಯುವಕನ ತಂದೆ, ವಿಡಿಯೋ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ನನ್ನ ಮಗ ಮೃತಪಟ್ಟಿದ್ದಾನೆ. "ನನ್ನ ಮಗ ಜೂನ್ 24 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ. ಕೆಲವು ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ಜೂನ್ 24 ರಂದೇ 'ಸರ್ಕಾರಿ ಚೆಸ್ಟ್​​ ಆಸ್ಪತ್ರೆ'ಗೆ ದಾಖಲಿಸಲಾಯಿತು. ಅದೇ ಆಸ್ಪತ್ರೆಯಲ್ಲಿ ಜೂನ್ 26 ರಂದು ಆತ ಸಾವನ್ನಪ್ಪಿದ್ದ. ಶನಿವಾರದಂದು ಅವನ ಅಂತ್ಯಸಂಸ್ಕಾರ ಮಾಡಲಾಯ್ತು ಎಂದು ಮೃತನ ತಂದೆ ಹೇಳಿದ್ದಾರೆ.

ಆದರೆ ವೆಂಟಿಲೇಟರ್ ಅನ್ನು ತೆಗೆದು ಹಾಕಲಾಯ್ತು ಎಂಬ ಆರೋಪವನ್ನು 'ಸರ್ಕಾರಿ ಚೆಸ್ಟ್​​ ಆಸ್ಪತ್ರೆ'ಯ ಅಧೀಕ್ಷಕ ಮಹಬೂಬ್ ಖಾನ್ ತಳ್ಳಿಹಾಕಿದ್ದಾರೆ.

Last Updated : Jun 29, 2020, 12:23 PM IST

ABOUT THE AUTHOR

...view details