ಕರ್ನಾಟಕ

karnataka

ETV Bharat / bharat

41ಸೈನಿಕರ ಪ್ರತಿಯಾಗಿ 82 ಉಗ್ರರ ತಲೆ ಉರುಳಿಸಿ: ಅಬ್ಬರಿಸಿದ ಕ್ಯಾ. ಅಮರೀಂದರ್‌ ಸಿಂಗ್! - ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌

41ಸೈನಿಕರ ಪ್ರತಿಯಾಗಿ 82 ಉಗ್ರರ ತಲೆ ಉರುಳಿಸಬೇಕು ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಘರ್ಜಿಸಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌

By

Published : Feb 19, 2019, 4:21 PM IST

ಚಂಡೀಗಢ : ಪುಲ್ವಾಮಾದಲ್ಲಿ ಉಗ್ರರು ಆತ್ಮಹತ್ಯೆ ದಾಳಿ ನಡೆಸಿ ಸೇನೆಯ 41 ಯೋಧರನ್ನ ಬಲಿಪಡೆದಿದ್ದಾರೆ. ಆದ್ರೇ, ನಮ್ಮ ಸೇನೆ 82 ಉಗ್ರರ ತಲೆಯನ್ನಾದರೂ ಉರುಳಿಸಬೇಕು. ಆ ಮೂಲಕ ಪ್ರತೀಕಾರ ಪಡೆಯಬೇಕು ಅಂತ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಘರ್ಜಿಸಿದ್ದಾರೆ.

ಪ್ರಜ್ಞಾಹೀನರಂತೆ ನಿತ್ಯ ಉಗ್ರರು ನಮ್ಮ ಯೋಧರನ್ನ ಹತ್ಯೆಗೈಯುತ್ತಿದ್ದಾರೆ. ಹಾಗಾಗಿ ಇಡೀ ರಾಷ್ಟ್ರ ಒಂದಾಗಿ ನಿಲ್ಲಬೇಕಿದೆ. 41ಕ್ಕೆ 82 ಉಗ್ರರ ಹತ್ಯೆಗೈದು ಸೇನೆ ಪ್ರತೀಕಾರ ತೀರಿಸಿಕೊಳ್ಳಬೇಕು ಅಂತ ಇಡೀ ದೇಶವೇ ಬಯಸುತ್ತಿದೆ. ಪಾಕ್‌ ವಿರುದ್ಧ ಈಗ ಗಟ್ಟಿ ತೀರ್ಮಾನ ಕೈಗೊಳ್ಳುವ ಸಮಯ.

ಮಿಲಿಟರಿಯೋ, ರಾಜತಾಂತ್ರಿಕನೋ ಇಲ್ಲ ಆರ್ಥಿಕವಾಗಿಯಾದರೂ ಸರಿ. ಇಲ್ಲ ಈ ಮೂರನ್ನೂ ಒಳಗೊಂಡ ಕ್ರಮ ತೆಗೆದುಕೊಂಡಾದರೂ ಪಾಕ್‌ಗೆ ಬುದ್ಧಿ ಕಲಿಸಬೇಕು ಅಂತ ಪಂಜಾಬ್‌ ಸಿಎಂ ಒತ್ತಾಯಿಸಿದ್ದಾರೆ.

ಪುಲ್ವಾಮಾ ದಾಳಿಯಾದ ತಕ್ಷಣವೇ ಪಾಕ್‌ಗೆ ಬುದ್ಧಿ ಕಲಿಸಬೇಕಿತ್ತು. ಪಾಕ್ ವಿರುದ್ಧ ಯಾವ ರೀತಿಯ ಪ್ರತೀಕಾರ ಪಡೆಯಬೇಕೆಂಬ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ಆದ್ರೇ, ಒಂದಂತೂ ನಿಜ. ಒಂದಿಷ್ಟು ಕ್ರಮಗಳನ್ನಂತೂ ತಕ್ಷಣವೇ ತೆಗೆದುಕೊಳ್ಳಬೇಕು.

ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌

ಯಾರೂ ಈಗ ಯುದ್ಧವನ್ನೇ ಮಾಡಿ ಅಂತ ಹೇಳುತ್ತಿಲ್ಲ. ಆದ್ರೇ, 41 ಯೋಧರನ್ನ ಬಲಿ ಪಡೆದಿರೋದು ಜೋಕ್‌ ಅಲ್ಲ. ಏನಾದ್ರೂ ಮಾಡಲೇಬೇಕಿದೆ. ನಾನೂ ಕೇಂದ್ರ ಸರ್ಕಾರದ ಜತೆಗೆ ನಿಲ್ಲುತ್ತೇನೆ. ಇಡೀ ದೇಶವೇ ಇದಕ್ಕೆ ಬೆಂಬಲವಾಗಿ ನಿಲ್ಲುತ್ತೆ. ಪಾಕ್‌ ಕೂಡ ನ್ಯೂಕ್ಲಿಯರ್‌ ಬಲ ಹೊಂದಿದ ರಾಷ್ಟ್ರ ಅಂದ್ಕೊಂಡು ಸುಮ್ಮನೇ ಕೂರಬಾರದು. ನಾವೂ ಕೂಡ ನ್ಯೂಕ್ಲಿಯರ್‌ ಸಾಮರ್ಥ್ಯ ಹೊಂದಿದ ರಾಷ್ಟ್ರ ಅನ್ನೋದನ್ನ ಮರೆಯಬಾರದು ಅಂತ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಗುಡುಗಿದ್ದಾರೆ.

ABOUT THE AUTHOR

...view details