ಇವೆಲ್ಲ ವೇಸ್ಟ್ ಅಂತಾ ಬಳಸಿ ಬಿಸಾಡಿದ ಪ್ಲಾಸ್ಟಿಕ್ ತುಂಡು, ಕಟ್ಟಿಂಗ್ ಪ್ಲೇಯರ್, ವೈರ್,,, ಅವುಗಳಿಂದಲೇ ಮಿನಿ ಯಂತ್ರಗಳನ್ನು ತಯಾರಿಸ್ತಿದಾರೆ ಒಡಿಶಾದ ಖಂಡಗಿರಿ ಸ್ಲಮ್‌ನ ಮಕ್ಕಳು.
ಸ್ಲಮ್‌ನ ಮಕ್ಕಳ ಜಾಣ್ಮೆಗೆ ತಲೆದೂಗದವರಿಲ್ಲ.. ಪ್ಲಾಸ್ಟಿಕ್ ಘನತ್ಯಾಜ್ಯದಿಂದ ಹೊಸ ಆವಿಷ್ಕಾರ! ಪ್ಲಾಸ್ಟಿಕ್ ಬಾಟಲ್ನಿಂದ ಮಿನಿ ರೋಬೋಟ್ಗಳು ರೆಡಿ:ಪ್ಲಾಸ್ಟಿಕ್ ವಸ್ತುಗಳನ್ನು ಒಮ್ಮೆ ಬಳಸಿ ಎಸೆದು ಪ್ರಕೃತಿ ಹಾನಿಗೆ ಕಾರಣವಾಗ್ತಿದ್ದೇವೆ. ಆದರೆ, ಈ ಚಿಣ್ಣರು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರೋಬೋಟ್‌ಗಳನ್ನು ತಯಾರಿಸುತ್ತಾರೆ. ಎಸೆದ ಪ್ಲಾಸ್ಟಿಕ್ ಬಾಟಲ್ಗಳಿಂದ ಮಿನಿ ರೋಬೋಟ್ಗಳು ತಯಾರಾಗಿವೆ. ಇವರ ಈ ವಿನೂತನ ಪ್ರಯೋಗ ಪ್ಲಾಸ್ಟಿಕ್ ತ್ಯಾಜ್ಯಕ್ಕೇ ಹೊಸ ಚೇತನ ಕೊಟ್ಟಿದೆ. ಚಿಂದಿಯಿಂದ ಬೃಹತ್ ರೋಬೋಟ್‌ಗಳನ್ನ ತಯಾರಿಸೋದೆ ಇವರ ಕನಸಂತೆ.
ಈ ಯಂಗ್ ಸೈಂಟಿಸ್ಟ್ಗಳ ಕೈಯಲ್ಲಿ ಕಸದಿಂದಲೇ ರಸ :ತಮ್ಮ ಸುತ್ತಮುತ್ತಲಿನ ಬೃಹತ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಸಮಸ್ಯೆ ನಿವಾರಣೆ ಜತೆಗೆ ಚಿಂದಿಯಿಂದ ರೋಬೋಟ್‌ಗಳನ್ನು ತಯಾರಿಸುವುದು ಇದರ ಹಿಂದಿರುವ ಸದುದ್ದೇಶ. ಬಾಗಿಲು ತೆರೆಯಲು ಪರ್ಯಾಯ ಮಾದರಿಯಾಗಿ ಸ್ವಯಂಚಾಲಿತ ಬಾಗಿಲುಗಳನ್ನೂ ತಯಾರಿಸಿದ್ದಾರೆ ಈ ಜಾಣರು.
ಚಿಣ್ಣರ ಕನಸಿಗೆ ಭುಬನೇಶ್ವರದ ಉನ್ಮುಕ್ತ ಸಂಸ್ಥೆ ದಾರಿದೀವಿಗೆ:ಇದೇ ಚಿಣ್ಣರ ಕನಸಿಗೆ ಭುಬನೇಶ್ವರದ ಉನ್ಮುಕ್ತ ಸಂಸ್ಥೆ ದಾರಿದೀವಿಗೆಯಾಗ್ತಿದೆ. ಈ ಮಕ್ಕಳ ಕಲೆ, ಜಾಣತನ, ಆಸಕ್ತಿ ಗಮನಿಸಿ ಈ ದಿಸೆಯಲ್ಲಿ ಇನ್ನಷ್ಟು ತರಬೇತಿ ನೀಡಲು ಮುಂದಾಗಿದೆ. ಅದೂ ಕೂಡ ಉಚಿತ. ಮಕ್ಕಳ ಈ ಪ್ರಕೃತಿ ಪ್ರೇಮ ಎಷ್ಟು ಶ್ಲಾಘಿಸಿದರೂ ಕಡಿಮೆನೇ..