ಕರ್ನಾಟಕ

karnataka

ETV Bharat / bharat

17 ಶಾಸಕರು ಆರ್​ಜೆಡಿ ಸಂಪರ್ಕದಲ್ಲಿದ್ದಾರೆ ಎಂಬುದು ಆಧಾರರಹಿತ: ನಿತೀಶ್ ಕುಮಾರ್ - ಶ್ಯಾಮ್​​ ರಜಕ್​ ಮತ್ತು ನಿತೀಶ್ ಕುಮಾರ್

ಬಿಹಾರದಲ್ಲಿ ಮೈತ್ರಿ ಸರ್ಕಾರಕ್ಕೆ ಪಕ್ಷಾಂತರ ಭೀತಿ ಎದುರಾಗಿದೆ. ಆರ್​ಜೆಡಿ ಜೊತೆ 17 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ನಾಯಕ ಶ್ಯಾಮ್​ ರಜಕ್ ಹೇಳಿಕೆ ನೀಡಿದ್ದು, ಈ ಸಂಖ್ಯೆ ಮುಂದೆ 20ಕ್ಕೆ ಏರಿಕೆಯಾಗಲಿದೆ ಎಂದಿದ್ದರು. ಆದರೆ, ಇದು ಆಧಾರರಹಿತ ಹೇಳಿಕೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

Shyam Razak and Nitish Kumar
ಶ್ಯಾಮ್​​ ರಜಕ್​ ಮತ್ತು ನಿತೀಶ್ ಕುಮಾರ್

By

Published : Dec 30, 2020, 7:34 PM IST

ನವದೆಹಲಿ:ಬಿಜೆಪಿ ಜೊತೆ ಸೇರಿ ಮತ್ತೊಮ್ಮೆ ಅಧಿಕಾರಿದ ಗದ್ದುಗೆ ಏರಿರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೀಗ ಭೀತಿ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ ಆರ್​ಜೆಡಿಯ ನಾಯಕ ಶ್ಯಾಮ್​​ ರಜಕ್​ ದೊಡ್ಡ ಬಾಂಬ್ ಸಿಡಿಸಿದ್ದರು.

ನಮ್ಮ ಜೊತೆ ಜೆಡಿಯುನ 17 ಶಾಸಕರು ನಿರಂತರ ಸಂಪರ್ಕದಲ್ಲಿದ್ದು, ನಮ್ಮ ಪಕ್ಷಕ್ಕೆ ಯಾವಾಗ ಬೇಕಾದರೂ ಸೇರ್ಪಡೆಯಾಗಬಹುದು. ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮುರಿಯಲು ನಾವು ಸಿದ್ಧರಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಳಿಕ ಬಿಹಾರ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಇದೀಗ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಈ ರೀತಿಯ ಮಾತುಗಳು ಆಧಾರರಹಿತವಾಗಿವೆ ಎಂದಿದ್ದಾರೆ.

ಇದನ್ನೂ ಓದಿಳ: ನನಗೆ ಸಿಎಂ ಆಗಲೇಬೇಕೆಂಬ ಹಠವಿಲ್ಲ: ನಿತೀಶ್ ಕುಮಾರ್ ಮಾರ್ಮಿಕ ನುಡಿ

ABOUT THE AUTHOR

...view details