ಬರೇಲಿ(ಉತ್ತರಪ್ರದೇಶ): ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯರಿಬ್ಬರು ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಯುಪಿ ಬೋರ್ಡ್ ಪರೀಕ್ಷೆ ಬರೆದಿದ್ದು, ಇದೀಗ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಆಗಿದ್ದಾರೆ.
ಸಾಫಿಯಾ ಜಾವೇದ್(17) ಹಾಗೂ ಸೋನಂ(17) ತಾವು ಬರೆದಿರುವ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸಾಫಿಯಾ ಕಳೆದ ಐದು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದು, ರಾಜ್ಯದಲ್ಲಿ ನಡೆದ 10ನೇ ತರಗತಿ ಪರೀಕ್ಷೆಯನ್ನ ಆಮ್ಲಜನಕದ ಸಿಲಿಂಡರ್ ಧರಿಸಿಯೇ ಎದುರಿಸಿದ್ದರು. ಈ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಫಿಯಾ ತಂದೆ ರಜೆ ತೆಗೆದುಕೊಂಡು ಮಗಳು ಪರೀಕ್ಷೆಗೆ ಹಾಜರಾಗುವಂತೆ ಸಹಾಯ ಮಾಡಿದ್ದರು.