ಹೈದರಾಬಾದ್:ಲಾಕ್ಡೌನ್ ವೇಳೆ ಜನರಿಗೆ ಮಾತ್ರ ಸಂಕಷ್ಟ ಎದುರಾಗಿಲ್ಲ. ಇದನ್ನು ಯಶಸ್ವಿಯಾಗಿ ನಿಭಾಯಿಸಲು ಪೊಲೀಸರು ಕೂಡಾ ಹರಸಾಹಸ ಪಡುತ್ತಿದ್ದಾರೆ. ಮನೆ-ಮಠ ಬಿಟ್ಟು ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಾರ್ವಜನಿಕರ ರಕ್ಷಣೆಗಾಗಿ ಇವರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ವೈದ್ಯರೂ ಕೂಡಾ ತಮ್ಮ ಕುಟುಂಬವನ್ನು ತ್ಯಾಗ ಮಾಡಿ ಜನರ ರಕ್ಷಣೆಗೆ ಹೋರಾಡುತ್ತಿದ್ದಾರೆ.
ಲಾಕ್ಡೌನ್ನಿಂದ ಸಾರ್ವಜನಿಕರಿಗೆ ಮಾತ್ರವೇ ಕಷ್ಟವಾಗಿಲ್ಲ.. ಇಲ್ಲಿವೆ ನೋಡಿ ''ಬೀದಿಗೆ ಬಿದ್ದವರ'' ಚಿತ್ರಗಳು - g krishna reddy tweet
ಲಾಕ್ಡೌನ್ ಘೋಷಣೆಯಾದಾಗಿನಿಂದ ಅದನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಕ್ಷರಶಃ ಬೀದಿಗೆ ಬಿದ್ದಿರುವ ಅವರು ತ್ಯಾಗ ಹಾಗೂ ವೈದ್ಯರ ನಿಸ್ವಾರ್ಥ ಸೇವೆಗೆ ಕೋಟಿ ಕೊಟ್ಟರೂ ಸಾಲದು.
ಲಾಕ್ಡೌನ್
ಕೊರೊನಾ ವಾರಿಯರ್ಸ್ ಅಂತಾನೇ ಕರೆಸಿಕೊಳ್ಳುತ್ತಿರುವ ಇವರ ಕಷ್ಟಗಳನ್ನು ಬಿಂಬಿಸುವ ಕೆಲವೊಂದು ಚಿತ್ರಗಳನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೃಷ್ಣಾರೆಡ್ಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಬಳಿ ಮಲಗಿರುವ, ಫುಟ್ಪಾತ್ನಲ್ಲಿ ಕುಳಿತು ಊಟ ಮಾಡುವ ಹಾಗೂ ವೈದ್ಯರು ತಮ್ಮ ಮನೆಯೊಳಗೆ ತೆರಳದೇ ಹೊರಗಡೆಯೇ ಕುಳಿತಿರುವ ಪಟಗಳು ಮನಕಲಕುವಂತಿವೆ.