ತಿರುವನಂತಪುರಂ :ಜ್ವರ ತಪಾಸಣೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಪವರ್ ಫೇಸ್ ಡಿಟೆಕ್ಷನ್ ತಂತ್ರಜ್ಞಾನ ಹೊಂದಿರುವ ಮೊದಲ ಥರ್ಮಲ್ ಮತ್ತು ಆಪ್ಟಿಕಲ್ ಇಮೇಜಿಂಗ್ ಕ್ಯಾಮೆರಾವನ್ನು ಕೇರಳದ ರಾಜಧಾನಿಗೆ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಖರೀದಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಅವರೊಂದಿಗೆ ಮಾತುಕತೆ ನಡೆಸಿರುವ ಶಶಿ ತರೂರ್ ಅವರ ತಂಡ, ಜ್ವರದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಲು ಮತ್ತು ಸುರಕ್ಷಿತವಾಗಿ ದೂರದಿಂದ ಸ್ಕ್ಯಾನ್ ಮಾಡಲು ಜಿಲ್ಲೆಗೆ ಯಂತ್ರದ ಅವಶ್ಯಕತೆ ಇತ್ತು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದೆ. ಯಂತ್ರದ ಖರೀದಿಗೆ ಕೇಂದ್ರ ಮಾಜಿ ಸಚಿವರು ಎಂಪಿಎಎಲ್ಡಿಎಸ್ ನಿಧಿಯನ್ನು ಬಳಸಿದ್ದಾರೆ.