ನವದೆಹಲಿ:ದೆಹಲಿ ಚುನಾವಣೆ ಮತದಾನದ ನಂತರ ಶೇಕಡವಾರು ಮತದಾನದ ಅಂತಿಮ ಅಂಕಿ- ಅಂಶ ನೀಡುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ಅಲ್ಲಿನ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ ರಣಬೀರ್ ಸಿಂಗ್, ಮತದಾನ ಪ್ರಮಾಣದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ದತ್ತಾಂಶಗಳ ಪರಿಶೀಲನೆ ಮಾಡಿದ್ದರಿಂದ ಘೋಷಣೆ ತುಸು ವಿಳಂಬವಾಗ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆಪ್ ಆರೋಪ ಅಲ್ಲಗಳೆದ ಚುನಾವಣಾ ಆಯೋಗ... ಕೊಟ್ಟ ಸ್ಪಷ್ಟನೆ ಏನು ಗೊತ್ತಾ?
ಎಎಪಿಯ ಟೀಕೆಗಳನ್ನು ಖಂಡಿಸಿ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್, ಅಂತಿಮ ಮತದಾರರ ಮತದಾನವನ್ನು ಘೋಷಿಸುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಫೆಬ್ರವರಿ 8 ರಂದು ದೆಹಲಿ ಚುನಾವಣೆಯ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆ, ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರು ಚುನಾವಣಾ ಆಯೋಗವನ್ನು ಮತದಾರರ ಶೇಕಡಾವಾರು ಪ್ರಮಾಣವನ್ನು ಹೊರಹಾಕಿಲ್ಲ ಎಂದು ಆರೋಪಿಸಿದ್ದರು. ಮತದಾನ ವ್ಯವಸ್ಥೆಯಲ್ಲಿ ಚುನಾವಣೆಯ ಉದಾಹರಣೆಗಳನ್ನು ಉಲ್ಲೇಖಿಸಿ ಸಂಜಯ್ ಸಿಂಗ್ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದ್ದರು.
ಸಂಜೆ ಆರುಗಂಟೆವರೆಗೆ ಮತದಾನ ನಡೆದಿದ್ದರಿಂದ ಚುನಾವಣಾ ಆಯೋಗ ಅಂತಿಮ ಮತದಾನದ ಪ್ರಮಾಣದ ಬಗ್ಗೆ ಅಂದೇ ಘೋಷಣೆ ಮಾಡಿರಲಿಲ್ಲ. ಚುನಾವಣಾ ಸಿಬ್ಬಂದಿ ರಾತ್ರಿಯಿಡೀ ಕಾರ್ಯನಿರ್ವಹಿಸಿ ನಿಖರ ಅಂಕಿ- ಅಂಶ ನೀಡಿದ್ದಾರೆ. ದತ್ತಾಂಶಗಳನ್ನ ಕಷ್ಟಪಟ್ಟು ಸಂಗ್ರಹಿಸಿದ್ದರಿಂದ ಘೋಷಣೆ ವಿಳಂಬವಾಗಿದೆ. ನಿಖರತೆ ಹಿನ್ನೆಲೆಯಲ್ಲಿ ತುಸು ತಡವಾಗಿದೆ ಎಂದು ಅವರು ರಣಬೀರ್ ಸಿಂಗ್ ಸಮಜಾಯಿಷಿ ನೀಡಿದ್ದಾರೆ.