ಮುಂಬೈ: ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.
ಎನ್ಸಿಪಿ ಸರ್ವಾನುಮತದಿಂದ ಕಾಂಗ್ರೆಸ್ ಮತ್ತು ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಅಜಿತ್ ಪವಾರ್ ಜನರಲ್ಲಿ ಗೊಂದಲ ಮೂಡಿಸಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಾನು ಈಗಲೂ ಎನ್ಸಿಪಿ ಪಕ್ಷದಲ್ಲಿದ್ದೇನೆ. ಶರದ್ ಪವಾರ್ ಅವರೇ ಪಕ್ಷದ ನಾಯಕರಾಗಿ ಮುಂದುವರೆಯಲಿದ್ದಾರೆ. ನಾನು ಈಗಲೂ ಎನ್ಸಿಪಿ, ಮುಂದೆಯೂ ಎನ್ಸಿಪಿ. ಶರದ್ ಪವಾರ್ ನಮ್ಮ ನಾಯಕರು. ಮುಂದಿನ ಐದು ವರ್ಷಗಳಿಗೆ ಎನ್ಸಿಪಿ- ಬಿಜೆಪಿ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಸುಭದ್ರ ಸರ್ಕಾರ ಸ್ಥಾಪಿಸಲಿದೆ. ಈ ಸರ್ಕಾರ ಪ್ರಾಮಾಣಿಕವಾಗಿ ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡಲಿದೆ. ಯಾವುದೇ ವಿಷಯದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಎಲ್ಲವೂ ಚೆನ್ನಾಗಿದೆ, ಸ್ವಲ್ಪ ತಾಳ್ಮೆ ಬೇಕಾಗಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದು ಅಜಿತ್ ಪವಾರ್ ಟ್ವೀಟ್ ಮಾಡಿದ ಬಳಿಕ ಅವರು ಹೀಗೆಂದಿದ್ದಾರೆ.
ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಯಾಗಿ ಸರ್ಕಾರ ರಚನೆ ಮಾಡುವ ಬಗ್ಗೆ ಮಾತುಕತೆ ಅಂತಿಮ ಹಂತದಲ್ಲಿರುವಾಗಲೇ, ರಾತ್ರೋರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎನ್ಸಿಪಿಯ ಅಜಿತ್ ಪವಾರ್ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಬಿಜೆಪಿ ಜೊತೆ ಕೈಜೋಡಿಸಿ ಉಪಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಬಗ್ಗೆ ಕೆಂಡಾಮಂಡಲರಾಗಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಕಾಂಗ್ರೆಸ್ ಮತ್ತು ಶಿವಸೇನೆ ಜೊತೆ ಸೇರಿ ಸರ್ಕಾರ ರಚನೆ ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.
ಅಜಿತ್ ಪವಾರ್ ಟ್ವಿಟ್ಟರ್ ಬಯೋಡೇಟಾ ಬದಲು: ಈ ಮಧ್ಯೆ ಪ್ರಮಾಣವಚನ ಸ್ವೀಕಾರದ ಬಳಿಕ ಅಜಿತ್ ಪವಾರ್ ತಮ್ಮ ಟ್ಟಿಟ್ಟರ್ ಖಾತೆಯ ಬಯೋಡೇಟಾವನ್ನು ಬದಲಾಯಿಸಿಜಕೊಂಡಿದ್ದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ಸಿಪಿ) ದ ಮುಖ್ಯಸ್ಥ ಎಂದು ಬರೆದುಕೊಂಡಿದ್ದಾರೆ.
ಅಜಿತ್ ಪವಾರ್ ಟ್ವಿಟ್ಟರ್ ಬಯೋಡೇಟಾ ಬದಲು