ಕೃಷ್ಣಗಿರಿ( ತಮಿಳುನಾಡು): ಕೃಷ್ಣಗಿರಿ ಜಿಲ್ಲೆಯಲ್ಲಿ 27 ವರ್ಷದ ಯುವಕನನ್ನು ಅಪರಿಚಿತರು ಹತ್ಯೆ ಮಾಡಿದ್ದಾರೆ. ಈ ವೇಳೆ ಹಲ್ಲೆಗೊಳಗಾದ ಯುವಕ ಪ್ರಾಣಕ್ಕಾಗಿ ಹೊರಾಡುತ್ತಿದ್ದರೂ ಯಾರೊಬ್ಬರು ಆತನ ಸಹಾಯಕ್ಕೆ ಬಂದಿಲ್ಲ. ಹೀಗೆ ಯುವಕ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕರುಳು ಹಿಂಡುವ ವಿಡಿಯೋವೊಂದು ಈಗ ವೈರಲ್ ಆಗಿದೆ.
ಪ್ರಾಣಕ್ಕಾಗಿ ಎಷ್ಟೇ ಅಂಗಲಾಚಿದರೂ ನೆರವಿಗೆ ಬಾರದ ಜನ: ಯುವಕನ ಹತ್ಯೆ - ಪ್ರಾಣಕ್ಕಾಗಿ ಅಂಗಲಾಚಿದ ವಿಡಿಯೋ ವೈರಲ್
ಕೃಷ್ಣಗಿರಿ ಜಿಲ್ಲೆಯ ಮೇಳ ಬೀದಿಯ ಓಲ್ಡ್ ಪೆಟ್ಟೈ ಮೂಲದ ಪೌಣರಾಜ (27) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು, ಯುವಕನ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಗೀಡಾದ ಯುವಕನನ್ನು ಕೃಷ್ಣಗಿರಿ ಜಿಲ್ಲೆಯ ಮೇಳ ಬೀದಿಯ ಓಲ್ಡ್ ಪೆಟ್ಟೈ ಮೂಲದ ಪೌಣರಾಜ (27) ಎಂದು ಗುರುತಿಸಲಾಗಿದೆ. ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕನ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳ ದಾಳಿಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕ ಜೀವ ಉಳಿಸಿಕೊಳ್ಳುವಲ್ಲಿ ಸ್ಥಳೀಯರ ನೆರವು ಯಾಚಿಸಿದ್ದಾನೆ. ಆದರೆ ಯಾರೊಬ್ಬರು ಆತನ ನೆರವಿಗೆ ಧಾವಿಸಿಲ್ಲ. ಕೊನೆಗೆ ತೀವ್ರ ರಕ್ತ ಸ್ರಾವದಿಂದ ಪೌಣರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಡಿಯೋ ಮಾಡಿರುವ ಕೆಲವರು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.