ಕರ್ನಾಟಕ

karnataka

ETV Bharat / bharat

'ಗಾಳಿಯಿಂದ ಸೋಂಕು ಹರಡಿದ ಬಗ್ಗೆ ಪುರಾವೆಗಳಿಲ್ಲ; ಆದ್ರೆ, ಈ ಕೆಲಸ ಮಾತ್ರ ಮಾಡಬೇಡಿ..' - corona invension

ಕೊರೊನಾ ಗಾಳಿಯಿಂದ ಹರಡಬಹುದೆಂಬ ಭೀತಿಯಲ್ಲಿ ಜನರಿದ್ದು, ಇದನ್ನು ಸಾಬೀತುಪಡಿಸುವ ಪುರಾವೆಗಳು ಸಿಕ್ಕಿಲ್ಲ ಎಂದು ಇಂಡಿಯನ್​ ಕೌನ್ಸಿಲ್ ಆಫ್​ ಮೆಡಿಕಲ್​ ರಿಸರ್ಚ್ ಸ್ಪಷ್ಟಪಡಿಸಿದೆ.

indian council of medical research
ಇಂಡಿಯನ್​ ಕೌನ್ಸಿಲ್ ಆಫ್​ ಮೆಡಿಕಲ್​ ರಿಸರ್ಚ್

By

Published : Apr 5, 2020, 5:26 PM IST

ನವದೆಹಲಿ: ಗಾಳಿಯಿಂದ ಸೋಂಕು ಹರಡುತ್ತದೆ ಎಂಬುದಕ್ಕೆ ಇಲ್ಲಿಯವರೆಗೂ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಇಂಡಿಯನ್​ ಕೌನ್ಸಿಲ್ ಆಫ್​ ಮೆಡಿಕಲ್​ ರಿಸರ್ಚ್ (ಐಸಿಎಂಆರ್​)​​ ಸ್ಪಷ್ಟಪಡಿಸಿದೆ.

ದೇಶದಲ್ಲಿ ಕೊರೊನಾ ಹರಡುವ ಬಗ್ಗೆಯೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಕೊರೊನಾ ಗಾಳಿಯಿಂದ ಹರಡಬಹುದೆಂಬ ಭೀತಿಯಲ್ಲಿ ಜನರಿದ್ದಾರೆ. ಈ ವೇಳೆ ಗಾಳಿಯಿಂದ ಕೊರೊನಾ ಸೋಂಕು ಹರಡಬಹುದು ಎಂಬ ವರದಿಯನ್ನು ತಳ್ಳಿಹಾಕಿದೆ.

ಕೆಲವು ದಿನಗಳ ಹಿಂದೆ ಅಮೆರಿಕ ವಿಜ್ಞಾನಿಗಳು ಕೊರೊನಾ ಸೋಂಕು ಉಸಿರಾಡುವ ಗಾಳಿಯಲ್ಲಿ, ಮಾತನಾಡುವ ವೇಳೆ ಒಬ್ಬರಿಂದ ಒಬ್ಬರಿಗೆ ಹರಡಬಹುದೆಂದು ಹೇಳಿದ್ದರು. ಅದ್ದರಿಂದ ಅಲ್ಲಿನ ಸರ್ಕಾರ ಸಾರ್ವಜನಿಕರಿಗೆ ಮಾಸ್ಕ್​ ಧರಿಸುವಂತೆ ಮನವಿ ಮಾಡಿತ್ತು. ಆದರೆ ಐಸಿಎಂಆರ್​ ಇದುವರೆಗೂ ಗಾಳಿಯಿಂದ ಸೋಂಕು ಹರಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಚ್ಯೂಯಿಂಗ್​, ಗುಟ್ಕಾ ಜಗಿದು ಉಗಿಯಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಹಾಗೂ ಚ್ಯೂಯಿಂಗ್​ ಗಮ್​​ ಜಗಿದು ಉಗಿಯುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಐಸಿಎಂಆರ್​ ಎಚ್ಚರಿಕೆ ನೀಡಿದೆ.

ABOUT THE AUTHOR

...view details