ತಮಿಳುನಾಡು:ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ತಮಿಳು ನಟ ವಿಜಯ್ ರಾಜಕೀಯ ಪ್ರವೇಶ ಕುರಿತು ಅವರು ಪ್ರತಿಕ್ರಿಯಿಸಿದ್ದು, ತಮ್ಮ ಹೆಸರಿನಲ್ಲಿ ನೋಂದಾಯಿತವಾಗಿರುವ ರಾಜಕೀಯ ಪಕ್ಷದೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ನಟ ವಿಜಯ್ ಅವರ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ನೋಂದಾಯಿಸಲಾಗಿದೆ. ಅವರ ತಂದೆ, ನಟ ಮತ್ತು ನಿರ್ದೇಶಕ ಎಸ್.ಎ. ಚಂದ್ರಶೇಖರ್ ತಮ್ಮ ಅಭಿಮಾನಿಗಳ ಕ್ಲಬ್ ಅನ್ನು ‘ಅಖಿಲ ಭಾರತ ತಲಪತಿ ವಿಜಯ್ ಮಕ್ಕಲ್ ಇಯಕ್ಕಂ’ ಎಂದು ನೋಂದಾಯಿಸಲು ಭಾರತ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದರು. ಈ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ ಈ ಕುರಿತು ವಿಜಯ್ ಅವರ ನೇರ ಸೂಚನೆಯ ಮೇರೆಗೆ ಪಕ್ಷವನ್ನು ನೋಂದಾಯಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ.