ಕರ್ನಾಟಕ

karnataka

ETV Bharat / bharat

ಸೇಂಟ್​ ಜಾರ್ಜ್​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕವೇ ಇಲ್ಲ.. ಮಹಾ ಕೈ ಶಾಸಕಿ ಸ್ಪಷ್ಟನೆ - undefined

ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಯತ್ನಿಸಿದೆ. ಸೇಂಟ್​ ಜಾರ್ಜ್​ ಆಸ್ಪತ್ರೆಯಲ್ಲಿ ಶ್ರೀಮಂತ್​ ಪಾಟೀಲ್​ ಎದೆ ನೋವಿಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರು ಇಲ್ಲವೇ ಇಲ್ಲ. ಹೀಗಾಗಿ ಇದರ ಹಿಂದೆ ಬಿಜೆಪಿಯ ಪಿತೂರಿ ಇದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ಯಶೋಮತಿ ಠಾಕೂರ್

By

Published : Jul 20, 2019, 2:20 PM IST

ಮುಂಬೈ: ಮುಂಬೈನ ಸೇಂಟ್​ ಜಾರ್ಜ್​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕವೇ ಇಲ್ಲ. ಹೀಗಿದ್ದಾಗ ಕಾಂಗ್ರೆಸ್​ ಶಾಸಕ ಶ್ರೀಮಂತ್ ಪಾಟೀಲ್ ಅಲ್ಲಿ ಏಕೆ ದಾಖಲಾಗಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಕಿಡಿ ಕಾರಿದ್ದಾರೆ.

ಶ್ರೀಮಂತ್ ಪಾಟೀಲ್ ಹೃದ್ರೋಗ ಚಿಕಿತ್ಸೆ ಕುರಿತು ಪ್ರತಿಕ್ರಿಯೆ

ನಿನ್ನೆ ಶಾಸಕಿ ಯಶೋಮತಿಯವರು ಸೇಂಟ್​ ಜಾರ್ಜ್​ ಆಸ್ಪತ್ರೆಗೆ ಆಗಮಿಸಿ, ಶ್ರೀಮಂತ್ ಪಾಟೀಲ್ ಭೇಟಿಗೆ ಪಟ್ಟು ಹಿಡಿದರು. ಈ ವೇಳೆ ಮುಂಬೈ ಪೊಲೀಸರು ಅನುಮತಿ ‌ನೀಡದಿರುವುದಕ್ಕೆ ವಾಗ್ವಾದ ಕೂಡ ನಡೆಸಿದ್ದರು. ನಂತರ ವಿಡಿಯೋ ಸಂದೇಶ ಕಳುಹಿಸಿರುವ ಅವರು, ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ದೋಸ್ತಿ ಸರ್ಕಾರ ಪತನ ಮಾಡಿ, ಅಧಿಕಾರಕ್ಕೆ ಬರಲು ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಯತ್ನಿಸಿದೆ. ಸೇಂಟ್​ ಜಾರ್ಜ್​ ಆಸ್ಪತ್ರೆಯಲ್ಲಿ ಶ್ರೀಮಂತ್​ ಪಾಟೀಲ್​ ಎದೆ ನೋವಿಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರು ಇಲ್ಲವೇ ಇಲ್ಲ. ಹೀಗಾಗಿ ಇದರ ಹಿಂದೆ ಬಿಜೆಪಿಯ ಪಿತೂರಿ ಇದೆ ಎಂದು ಕಿಡಿಕಾರಿದ್ದಾರೆ.

ಪೊಲೀಸರ ಭದ್ರತೆಯಲ್ಲಿ ಕರ್ನಾಟಕದ ಶಾಸಕ ಶ್ರೀಮಂತ್​ ಪಾಟೀಲ್ ಆಸ್ಪತ್ರೆಯಲ್ಲಿದ್ದಾರೆ. ಶ್ರೀಮಂತ್ ಪಾಟೀಲ್​ಗೆ ಏನೂ ಆಗಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ. ಒಂದು ವೇಳೆ ಅವರಿಗೆ ಹೃದಯ ಸಂಬಂಧ ಸಮಸ್ಯೆ ಇದ್ದರೆ, ಅವರು ಬೇರೆಯೇ ಆಸ್ಪತ್ರೆಗೆ ತೆರಳಿ ಉತ್ತಮ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಆಸ್ಪತ್ರೆಯಲ್ಲಿನ ಪೊಲೀಸರು ನಮ್ಮ ಶಾಸಕನನ್ನು ನೋಡುವುದಕ್ಕೆ ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.

For All Latest Updates

TAGGED:

ABOUT THE AUTHOR

...view details