ಪಣಜಿ (ಗೋವಾ):ಆಯುರ್ವೇದ ಚಿಕಿತ್ಸೆ ಸೇರಿದಂತೆ ಪರ್ಯಾಯ ಔಷಧಿಗಳ ಸಹಾಯದಿಂದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಅವರನ್ನು ಕೋವಿಡ್ -19 ನಿಂದ ಗುಣಪಡಿಸಲಾಗಿದೆ ಎಂದು ಆಯುಷ್ ರಾಜ್ಯ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ವಿಶ್ವಾಸದ ಹೇಳಿಕೆ ನೀಡಿದ್ದರು. ಈ ಸಂಬಂಧ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೊರೊನ ವೈರಸ್ ಗೆ ಯಾವುದೇ ಆಯುರ್ವೇದ ಚಿಕಿತ್ಸೆ ಇಲ್ಲ ಎಂದು ಗುರುವಾರ ಹೇಳಿಕೆ ನೀಡಿದ್ದಾರೆ.
ಪರ್ಯಾಯ ಔಷಧದ ವೈದ್ಯರಾಗಿರುವ ಸಾವಂತ್ ಮುಂದುವರೆದು ಮಾತನಾಡಿ, ಆಯುರ್ವೇದ ಚಿಕಿತ್ಸೆಯು ಕೋವಿಡ್ -19 ವಿರುದ್ಧ ಹೋರಾಡಲು ದೇಹದಲ್ಲಿ ಪ್ರಚೋದಕ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಕೋವಿಡ್ -19 ರೋಗಿಗಳಿಗೆ ಮತ್ತು ಕ್ವಾರಂಟೈನ್ ನಲ್ಲಿರುವವರಿಗೆ ಸಮಗ್ರ ಚಿಕಿತ್ಸಾ ಕ್ರಮವನ್ನು ಅನುಸರಿಸಲು ಪರಿಚಯಿಸಿದ ದೇಶದ ಮೊದಲ ರಾಜ್ಯ ಗೋವಾ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.