ಕರ್ನಾಟಕ

karnataka

ETV Bharat / bharat

ಅಂದು ವರಂಗಲ್​​...ಇಂದು ಸೈಬರಾಬಾದ್​​.. ರಿಯಲ್​ ಲೈಫ್​ ಸಿಂಗಂ ಇವರು! - ಹುಬ್ಬಳ್ಳಿ ಮೂಲದ ವೀರ ಅಧಿಕಾರಿ ರಿಯಲ್​ ಸಿಂಗಂ ಸಜ್ಜನಾರ್

ಹುಬ್ಬಳ್ಳಿ ಮೂಲದ ಸಜ್ಜನಾರ್ ಅಂದು ವರಂಗಲ್​​ನಲ್ಲಿ ಆಸಿಡ್​ ದಾಳಿಯ ಆರೋಪಿಯನ್ನ ಹೊಡೆದುರುಳಿಸಿ, ಇಂದು ವೈದ್ಯೆ ಹತ್ಯೆ ಮಾಡಿದವರನ್ನು ಎನ್​​ಕೌಂಟರ್​​ ಮಾಡಿದ್ದು, ಇಡೀ ದೇಶವೇ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

Real Life Singham .
ರಿಯಲ್​ ಲೈಫ್​ ಸಿಂಗಂ

By

Published : Dec 6, 2019, 10:01 AM IST

ಹೈದರಾಬಾದ್​: ಕನ್ನಡದ ಅದರಲ್ಲೂ ಗಂಡು ಮೆಟ್ಟಿನ ನಾಡು ಹುಬ್ಬಳ್ಳಿ ಮೂಲದ ವೀರ ಅಧಿಕಾರಿ ರಿಯಲ್​ ಸಿಂಗಂ ಸಜ್ಜನಾರ್​ ಎನ್​ಕೌಂಟರ್​​ ಸ್ಪೆಷಲಿಸ್ಟ್​ ಎಂದೇ ಕರೆಯಲಾಗುತ್ತಿದೆ. ಹೌದು ಈ ಹೆಸರಿಗೆ ತಕ್ಕಂತೆ ಅಂದು ವರಂಗಲ್​​​ ಆಸಿಡ್​ ದಾಳಿಯ ಆರೋಪಿಯನ್ನ ಇದೇ ಅಧಿಕಾರಿ ಹೊಡೆದು ಹಾಕಿದ್ದರು.

ಆಗ ಆಂಧ್ರಪ್ರದೇಶದಾದ್ಯಂತ ಅಧಿಕಾರಿ ಕ್ರಮಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿತ್ತು. ಇದೀಗ ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿರುವ ವಿಶ್ವನಾಥ್​ ಸಜ್ಜನರ್​, ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳನ್ನ ಎನ್​​ಕೌಂಟರ್​ ಮಾಡಿ ಇಡೀ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ವೈದ್ಯೆ ಹತ್ಯೆಯ ಮರುಸೃಷ್ಟಿ ಮಾಡಲು ಸೈಬರಾಬಾದ್​ ಪೊಲೀಸರು ಘಟನಾ ಸ್ಥಳಕ್ಕೆ ಆರೋಪಿಗಳನ್ನ ಕರೆದೊಯ್ದಿದ್ದರು. ನಡುರಾತ್ರಿ 3ಗಂಟೆಯಿಂದ ಬೆಳಗಿನ 6 ಗಂಟೆ ವೇಳೆಗೆ ಇವರೆಲ್ಲ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತ್ಮರಕ್ಷಣೆಗೆ ಪೊಲೀಸರು ಈ ನಾಲ್ವರು ಆರೋಪಿಗಳನ್ನ ಎನ್​ಕೌಂಟರ್​ ಮಾಡಿದ್ದಾರೆ. ಈ ಎನ್​ಕೌಂಟರ್​ ಹಿಂದಿನ ಮಾಸ್ಟರ್​ ಮೈಂಡ್​ ಹಾಗೂ ಇಂತಹ ದಿಟ್ಟ ನಿರ್ಧಾರದ ಹಿಂದಿರುವ ವ್ಯಕ್ತಿ ಇದೇ ಒನ್​ ಅಂಡ್​ ಓನ್ಲಿ ವಿಶ್ವನಾಥ್​ ಸಜ್ಜನರ್​​

ABOUT THE AUTHOR

...view details