ವಾಷಿಂಗ್ಟನ್:ಇನ್ನು ಕೇವಲ ಎಂಟೇ ಎಂಟು ವರ್ಷಗಳಲ್ಲಿ ಭಾರತ ವಿಶ್ವದ ಹೆಚ್ಚು ಜನಸಂಖ್ಯೆಯುಳ್ಳ ದೇಶ ಎಂದು ಬಿರುದಾಂಕಿತವಾಗಲಿದೆ!
ಈವರೆಗೆ ಅತಿಹೆಚ್ಚು ಜನಸಂಖ್ಯೆಯುಳ್ಳ ದೇಶ ಎಂದು ಕರೆಸಿಕೊಳ್ಳುತ್ತಿದ್ದ ಚೀನಾವನ್ನು ಭಾರತ ಪಕ್ಕಕ್ಕೆ ಸರಿಸಿ, ಆ ಪಟ್ಟಕ್ಕೇರಲಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
'The world Population Prospects 2019? Highlights' ವರದಿಯಲ್ಲಿ ತಿಳಿಸಿರುವಂತೆ, 2019 - 2050ರ ಅವಧಿಯಲ್ಲಿ ಚೀನಾದ ಜನಸಂಖ್ಯೆ ಪ್ರಮಾಣ ಶೇ. 2.2ರಷ್ಟು ಇಳಿಕೆಯಾಗಲಿದ್ದು, 31.4 ಮಿಲಿಯನ್ ಜನಸಂಖ್ಯೆ ಇರಲಿದೆ. ಭಾರತದ ಜನಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ.
ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೋ, ಇಥಿಯೋಫಿಯಾ, ತಾಂಜಾನಿಯಾ, ಇಂಡೋನೇಷ್ಯಾ, ಈಜಿಫ್ಟ್ ಹಾಗೂ ಅಮೆರಿಕದಲ್ಲಿ ಜನಸಂಖ್ಯೆ ಗಣನೀಯವಾಗಿ ಏರುತ್ತಿದೆ. ಉಳಿದ 8 ರಾಷ್ಟ್ರಗಳ ಅರ್ಧದಷ್ಟು ಜನಸಂಖ್ಯೆಯನ್ನು ಭಾರತವೊಂದೇ ಹೊಂದಲಿದೆ ಎಂದು ವರದಿ ಹೇಳಿದೆ.
ಇನ್ನು 2050ರ ವೇಳೆಗೆ ವಿಶ್ವದ ಜನಸಂಖ್ಯೆಯೂ ಏರಿಕೆಯಾಗಲಿದೆ. ಸದ್ಯ 7.7 ಬಿಲಿಯನ್ ಜನಸಂಖ್ಯೆಯಿದ್ದು, 9.7 ಬಿಲಿಯನ್ಗೆ ಏರಿಕೆ ಕಾಣಲಿದೆ. ಜನಸಂಖ್ಯಾ ನಿಯಂತ್ರಣ ಈ ಸಂದರ್ಭದಲ್ಲಿ ಅನಿವಾರ್ಯ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.