ಕರ್ನಾಟಕ

karnataka

ETV Bharat / bharat

ವಿಶೇಷ ಲೇಖನ.. ಕೊರೊನಾ ವೈರಸ್ ವಂಶವಾಹಿನಿಯ ಕಥೆ..

ಸಾರ್ಸ್-ಸಿಒವಿ-2 ಜೀನ್ ಆಗಿದ್ದು, ಈ ವೈರಸ್‌ನಿಂದಾಗಿ ಕೋವಿಡ್ 19 ಹುಟ್ಟಿಕೊಂಡಿದೆ ಎನ್ನಲಾಗಿದ್ದು ಇದು ಪ್ರೊಟೀನ್‌ನಲ್ಲಿ ಸುತ್ತಿದ ಒಂದು ಕೆಟ್ಟ ಸಾಮಗ್ರಿ ಎಂದೇ ಕರೆಯಲಾಗಿದೆ.

the-whys-and-hows-of-coronavirus-genome
ಕೊರೊನಾವೈರಸ್ ವಂಶವಾಹಿನಿಯ ಕಥೆ

By

Published : May 6, 2020, 4:47 PM IST

ನಾವೆಲ್ ಕೊರೊನಾ ವೈರಸ್‌ ಅತ್ಯಂತ ಹೇಯ ಮತ್ತು ಭೀಕರ. ಈ ವಂಶವಾಹಿನಿಯ ಹಿನ್ನೆಲೆಯನ್ನು ಹುಡುಕಲು ವಿಜ್ಞಾನಿಗಳು ಭಾರಿ ಶ್ರಮಿಸಿದ್ದಾರೆ. ವೈರಸ್‌ಗೆ ಔಷಧ ಅಥವಾ ಲಸಿಕೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ, ಜೆನೋಮ್ ಸೀಕ್ವೆನ್ಸಿಂಗ್‌ನ ಕಂಡುಕೊಳ್ಳಬೇಕು. ಹಲವು ವಿಶೇಷತೆಗಳು ಮತ್ತು ಅಚ್ಚರಿಗಳನ್ನು ಈ ವಂಶವಾಹಿನಿ ಒಳಗೊಂಡಿರುತ್ತದೆ.

ವೈರಸ್‌ ಎಂಬುದು ಪ್ರೊಟೀನ್‌ನಲ್ಲಿ ಸುತ್ತಿದ ಒಂದು ಕೆಟ್ಟ ಸಾಮಾಗ್ರಿ ಎಂದು 1977ರಲ್ಲಿ ಜೀಯನ್ ಮತ್ತು ಪೀಟರ್ ಮೆಡಾವಾರ್‌ ಹೇಳಿದ್ದಾರೆ. ಈ ವರ್ಷದ ಜನವರಿಯಲ್ಲಿ ಅಂಥದ್ದೊಂದು ಕೆಟ್ಟ ಸಾಮಾಗ್ರಿ ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ. ಇದು ಸಾರ್ಸ್-ಸಿಒವಿ-2 ಜೀನ್ ಆಗಿದೆ. ಈ ವೈರಸ್‌ನಿಂದಾಗಿ ಕೋವಿಡ್-19 ಹುಟ್ಟಿಕೊಂಡಿದೆ. ಈ ಜೀನ್‌ನ ಪ್ರಾಮುಖ್ಯತೆಯೇನು? ವೈರಸ್‌ನ ಹೊಡೆದೋಡಿಸಲು ನಮಗೆ ಹೇಗೆ ಜೀನ್ ಸಹಾಯ ಮಾಡಿದೆ? ಅನ್ನೋದನ್ನ ನೋಡೋದಾದ್ರೆ..

41 ವರ್ಷದ ವ್ಯಕ್ತಿಯಿಂದ ವೈರಸ್‌ನ ವಿಜ್ಞಾನಿಗಳು ಸಂಗ್ರಹಿಸಿದ್ದಾರೆ. ಈ ವ್ಯಕ್ತಿ ವುಹಾನ್‌ನ ಮೀನು ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಇದು ನಾವೆಲ್ ಕೊರೊನಾ ವೈರಸ್‌ನ ಮೂಲಕ ಎಂದು ನಂಬಲಾಗಿದೆ. ಸಿಒವಿ ತಡೆಯು ಔಷಧಗಳು ಮತ್ತು ಲಸಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಮಾದರಿ ಜೀನ್ ಸೀಕ್ವೆನ್ಸಿಂಗ್‌ನ ಆಧರಿಸಿ ಸಂಶೋಧಕರು ಕೆಲಸ ಮಾಡುತ್ತಿದ್ದಾರೆ. ಮೂಲ ಕೋಶವನ್ನು ಒಡೆಯಲು ನಿರಂತರವಾಗಿ ಪ್ರಯತ್ನಿಸುತ್ತದೆ. ತ್ವರಿತವಾಗಿ ಇದನ್ನು ನಕಲು ಮಾಡಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಮೀರಿಸುತ್ತದೆ. ಕೋವಿಡ್ 19 ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳ ಪ್ರಕಾರ, ಇಡೀ ಕೊರೊನಾ ವೈರಸ್ ಜೆನೋಮ್ ಹೊಂದಿರುವ ಆರ್‌ಎನ್‌ಎ ಎಳೆಯನ್ನು ಮೂಲ ಕೋಶಕ್ಕೆ ಇದು ಒಳಸೇರಿಸುತ್ತದೆ.

ಬಾಧಿತ ಕೋಶದ ಒಳಗೆ ಸೃಷ್ಟಿಯಾಗುವ ಮೊದಲ ಸಾಂಕ್ರಾಮಿಕ ಪ್ರೊಟೀನ್‌ನ 16 ನಾನ್ ಸ್ಟ್ರಕ್ಚರಲ್‌ ಪ್ರೊಟೀನ್‌ (ಎನ್‌ಎಸ್‌ಪಿ) ಎಂದು ಕರೆಯಲಾಗುತ್ತದೆ. ಇವು ಒಟ್ಟಿಗೆ ಸೇರಿಕೊಂಡಿರುತ್ತವೆ. ಈ ಪೈಕಿ ಎರಡು ಪ್ರೊಟೀನ್‌ಗಳು ಕತ್ತರಿಯ ಹಾಗೆ ಕೆಲಸ ಮಾಡುತ್ತವೆ. ಇವು ಇತರ ಪ್ರೊಟೀನ್‌ಗಳ ಮಧ್ಯೆ ಇರುವ ಸಂಪರ್ಕವನ್ನು ಕಡಿದು ಹಾಕುತ್ತವೆ. ಹೀಗಾಗಿ ಈ ವೈರಸ್‌ಗಳು ತಮ್ಮ ಕೆಲಸವನ್ನು ಯಾವುದೇ ಅಡ್ಡಿ ಇಲ್ಲದೇ ಮಾಡಬಹುದಾಗಿರುತ್ತದೆ. ಕೆಲವು ಪ್ರೋಟೀನ್‌ಗಳ ಕಾರ್ಯನಿರ್ವಹಣೆ ತೀವ್ರವಾಗಿದ್ದರೆ, ಇನ್ನು ಕೆಲವು ಪ್ರೊಟೀನ್‌ಗಳು ಯಾವ ಕೆಲಸವನ್ನೂ ಮಾಡದೇ ಇರುತ್ತವೆ. ಮೂಲ ಕೋಶವನ್ನು ಹಾಳು ಮಾಡುವಲ್ಲಿ ಕೆಲವು ಪ್ರೊಟೀನ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿ ಪ್ರೊಟೀನ್‌ ಕೂಡ ಬೇರೆ ಬೇರೆ ಕೆಲಸ ಮಾಡುತ್ತಿರುತ್ತವೆ.

ಎನ್‌ಎಸ್‌ಪಿಗಳ ಪೈಕಿ 3ನೇ ಎನ್‌ಎಸ್‌ಪಿ ಅತ್ಯಂತ ದೊಡ್ಡದು. ಇದು ಎರಡು ಪ್ರಮುಖ ಕೆಲಸಗಳನ್ನು ಮಾಡುತ್ತದೆ. ಇದು ಇತರ ಪ್ರೋಟೀನ್‌ ಲಿಂಕ್‌ಗಳನ್ನು ಕತ್ತರಿಸಿ ಹಾಕುತ್ತದೆ ಮತ್ತು ಬಾಧಿತ ಕೋಶದ ಪ್ರೊಟೀನ್ ಸ್ಟ್ರಕ್ಚರ್‌ನ ಬದಲಿಸುತ್ತದೆ. ಪ್ರೋಟೀನ್‌ಗಳನ್ನು ಸುಲಭವಾಗಿ ಗುರುತಿಸಲು ಮತ್ತು ಶುದ್ಧಗೊಳಿಸಲು ಒಂದು ಆರೋಗ್ಯಕರ ಪ್ರೊಟೀನ್ ಅವಕಾಶ ಮಾಡುತ್ತದೆ. ಆದರೆ, ಎನ್‌ಎಸ್‌ಪಿ3 ಈ ಸೌಲಭ್ಯವನ್ನು ಬದಲಿಸಿ, ಪ್ರೋಟಿನ್‌ನ ಕೆಲಸವನ್ನೇ ಹೆಚ್ಚು ಕಡಿಮೆ ಮಾಡುತ್ತದೆ. ಮಾನವನ ಕೋಶಗಳಲ್ಲಿ ಆಂಟಿವೈರಲ್‌ ಪ್ರೋಟಿನ್‌ಗಳು ಇರುತ್ತವೆ. ಇವು ವೈರಸ್‌ನ ಆರ್‌ಎನ್‌ಎ ಗುರುತಿಸಿ ನಾಶ ಮಾಡುತ್ತವೆ. ವೈರಸ್‌ನ ಜೀನ್‌ ಅನ್ನು ಬದಲಿಸಲು ಎನ್‌ಎಸ್‌ಪಿ 10 ಮತ್ತು ಎನ್‌ಎಸ್‌ಪಿ 16 ಒಟ್ಟಾಗಿ ಕೆಲಸ ಮಾಡುತ್ತವೆ. ಇದರಿಂದ ಯಾವುದೇ ದಾಳಿಯನ್ನೂ ಇವು ತಡೆಯಬಲ್ಲ ಶಕ್ತಿ ಹೊಂದುತ್ತವೆ.

ಬಾಧಿತ ಕೋಶಗಳು ತಮ್ಮದೇ ಪ್ರೊಟೀನ್‌ಗಳನ್ನು ಉತ್ಪಾದಿಸಿಕೊಳ್ಳುವ ಪ್ರಕ್ರಿಯೆಯನ್ನು ಎನ್‌ಎಸ್‌ಪಿ 1 ಕಡಿಮೆ ಮಾಡುತ್ತದೆ. ಬಾಧಿತ ಕೋಶದಲ್ಲಿ ದ್ರವ ತುಂಬಿದ ಗುಳ್ಳೆಗಳನ್ನು ನಿರ್ಮಿಸಲು ಎನ್‌ಎಸ್‌ಪಿ4 ಸಹಾಯ ಮಾಡುತ್ತದೆ. ಈ ಗುಳ್ಳೆಗಳ ಒಳಗೆ ವೈರಸ್‌ನ ಹೊಸ ಪ್ರತಿಯನ್ನು ನಿರ್ಮಿಸಲಾಗಿರುತ್ತದೆ. ಎನ್‌ಎಸ್‌ಪಿ7 ಮತ್ತು ಎನ್‌ಎಸ್‌ಪಿ8 ಸಹಾಯದಿಂದ ಆರ್‌ಎನ್‌ಎ ಜೀನ್‌ನ ಹೊಸ ಪ್ರತಿಗಳನ್ನು ಎನ್‌ಎಸ್‌ಪಿ 12 ಸೃಷ್ಟಿಸುತ್ತದೆ. ರೆಮ್‌ಡಿಸಿವಿರ್ (ಆಂಟಿವೈರಲ್‌ ಔಷಧ) ಎನ್‌ಎಸ್‌ಪಿ 12 ರ ಕಾರ್ಯನಿರ್ವಹಣೆಯನ್ನು ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಒಂದು ಜೀವಿಯ ಜೆನೆಟಿಕ್ ಕೋಡ್‌ ಅನ್ನು ಡಿಎನ್‌ಎ ಮತ್ತು ಆರ್‌ಎನ್‌ಎ ಹೊಂದಿರುತ್ತವೆ. ಬಹುತೇಕ ಜೀವಿಗಳು ತಮ್ಮ ಆನುವಂಶೀಯ ಮಾಹಿತಿಯನ್ನು ಡಿಎನ್‌ಎ ಹೊಂದಿರುತ್ತದೆ ಮತ್ತು ತಮ್ಮ ಮುಂದಿನ ಜೀವಿಗೆ ಇದನ್ನು ವರ್ಗಾವಣೆ ಮಾಡುತ್ತದೆ. ಅಮಿನೋ ಆಸಿಡ್ ಸೀಕ್ವೆನ್ಸ್‌ನ ಮಾಹಿತಿಯನ್ನು ಪ್ರೊಟೀನ್‌ನಿಂದ ಜೀನ್‌ಗಳಿಗೆ ಸಾಗಿಸುವುದು ಆರ್‌ಎನ್ಎ ಯ ಮುಖ್ಯ ಕಾರ್ಯನಿರ್ವಹಣೆಯಾಗಿದೆ. ಕೋವಿಡ್‌ 19 ರೀತಿಯ ಕೆಲವು ವೈರಸ್‌ಗಳು ಆರ್‌ಎನ್‌ಎಯನ್ನೇ ಜೆನೆಟಿಕ್ ಅಂಶವನ್ನಾಗಿ ಹೊಂದಿರುತ್ತವೆ. ಡಿಎನ್‌ಎಯಲ್ಲಿ ಅಡೆನೈನ್ (ಎ), ಸೈಟೋಸಿನ್‌ (ಸಿ), ಗ್ವಾನೈನ್ (ಜಿ) ಮತ್ತು ಥೈಮೈನ್ (ಟಿ) ಎಂಬ ನಾಲ್ಕು ನ್ಯೂಕ್ಲಿಯೋಬೇಸ್‌ಗಳು ಇರುತ್ತವೆ.

ಇವು ಮೂಲ ಜೋಡಿಯಾಗಿರುತ್ತವೆ. ಇವೇ ಜೀವಿಯ ಜೆನೆಟಿಕ್ ಮಾಹಿತಿಯನ್ನು ಸಂಗ್ರಹಿಸಿಕೊಂಡಿರುತ್ತವೆ. ಪ್ರತಿ ಜೋಡಿಯೂ ಒಂದು ಸಕ್ಕರ ಮತ್ತು ಒಂದು ಪಾಸ್ಫರಿಕ್ ಆಸಿಡ್ ಕಣಕ್ಕೆ ಲಿಂಕ್ ಆಗಿರುತ್ತದೆ. ಮೂಲ ಜೋಡಿ, ಸಕ್ಕರೆಯ ಕನ ಮತ್ತು ಪಾಸ್ಫರಿಕ್ ಆಸಿಡ್‌ನ ಕಣವನ್ನು ನ್ಯೂಕ್ಲಿಯೋಟೈಡ್ ಎಂದು ಕರೆಯಲಾಗುತ್ತದೆ. ಇವು ತಿರುಚಿದ ಏಣಿಯ ರೀತಿಯಲ್ಲಿ ಎಳೆಯ ಆಕಾರವನ್ನು ಹೊಂದಿರುತ್ತವೆ. ಆರ್‌ಎನ್‌ಎ ಒಂದೇ ಎಳೆಯನ್ನು ಹೊಂದಿರುತ್ತದೆ. ಆರ್‌ಎನ್ಎಯಲ್ಲಿ ಥೈಮೈನ್ ಬದಲಿಗೆ ಯುರಾಸಿಲ್ (ಯು) ಇರುತ್ತದೆ.

ನಾವೆಲ್ ಕೊರೊನಾವೈರಸ್ ಮೊದಲು ಮಾಲೆಕ್ಯೂಲ್‌ ಸ್ಟ್ರಕ್ಚರ್‌ನಲ್ಲಿ ಹೋಸ್ಟ್ ಮೆಕಾನಿಸಂ ಅನ್ನು ಅಳವಡಿಸಿಕೊಳ್ಳುತ್ತದೆ. ನಂತರ, ಹೋಸ್ಟ್‌ನಲ್ಲಿರುವ ಪ್ರೊಟೀನ್ ಅನ್ನು ವೈರಸ್ ಪ್ರೊಟೀನ್ ಆಗಿ ಪರಿವರ್ತಿಸುತ್ತದೆ. ಲಯವ್ ಹೋಸ್ಟ್‌ ಸೆಲ್‌ಗಳನ್ನು ವೈರಸ್‌ಗಳು ಹೈಜಾಕ್ ಮಾಡಿ, ಅವುಗಳನ್ನು ಪರಿವರ್ತಿಸುತ್ತವೆ. ಸೂಕ್ತವಾದ ಹೋಸ್ಟ್ ಸೆಲ್‌ ಅನ್ನು ಕೊರೊನಾ ವೈರಸ್‌ ಕಂಡುಕೊಂಡು ಅದಕ್ಕೆ ಆರ್‌ಎನ್‌ಎ ಎಳೆಯನ್ನು ಸೇರಿಸುತ್ತದೆ. ಆ ಒಂದು ಎಳೆಯಲ್ಲಿ ವೈರಸ್‌ನ ಜೆನೆಟಿಕ್ ಕೋಡ್ ಇರುತ್ತದೆ. ಕೊರೊನಾವೈರಸ್‌ನ ಆರ್‌ಎನ್‌ಎಯಲ್ಲಿ 30 ಸಾವಿರ ಜೆನೆಟಿಕ್ ಮೂಲ ಅಥವಾ ಅಕ್ಷರಗಳು ಇರುತ್ತವೆ. ಕೋವಿಡ್‌ 19 ರಲ್ಲಿ 29 ಪ್ರೊಟೀನ್‌ಗಳಿಗೆ ಸಂಬಂಧಿಸಿದ ಪ್ರಮುಖ ಜೀನ್‌ಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಪ್ರೊಟೀನ್‌ಗಳು ರೋಗನಿರೋಧಕ ಶಕ್ತಿಯ ಪ್ರತಿಕ್ರಿಯೆಯನ್ನು ಹತ್ತಿಕ್ಕುವುದರಿಂದ ದ್ವಿಗುಣಗೊಳ್ಳುವವರೆಗೆ ಹಲವು ವಿಧದಲ್ಲಿ ಕಾರ್ಯನಿರ್ವಹಿಸುತ್ತವೆ.

ಕೋವಿಡ್ 19 ಹೊರ ಪೊರೆಯ ಮೇಲೆ ನಾಲ್ಕು ಸ್ಟ್ರಕ್ಚರಲ್ ಪ್ರೊಟೀನ್‌ಗಳು ಇರುತ್ತವೆ. ಇವುಗಳನ್ನು ಸ್ಪೈಕ್ (ಎಸ್), ಎನ್ವೆಲಪ್ (ಇ), ಮೆಂಬ್ರೇನ್ (ಎಂ) ಮತ್ತು ನ್ಯೂಕ್ಲಿಯೋಕ್ಯಾಪ್ಸಿಡ್ (ಎನ್) ಎಂದು ಕರೆಯಲಾಗಿದೆ. ಆರ್‌ಎನ್‌ಎ ರಕ್ಷಣೆ ಮಾಡುವುದರ ಹೊರತಾಗಿ, ವೈರಸ್‌ನ ಹೊಸ ಪ್ರತಿಯನ್ನು ಜೋಡಿಸಲು ಮತ್ತು ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ. ಈ ಪೈಕಿ ವೈರಸ್‌ ಚೂಪಾದ ಅಕೃತಿಯನ್ನು ಎಸ್‌ ಪ್ರೊಟೀನ್ ಒದಗಿಸುತ್ತದೆ. ಇದರ ಒಂದು ಭಾಗವು ವಿಸ್ತರಿಸಿ ಎಸಿಇ2 ಪ್ರೊಟೀನ್‌ಗೆ ಅಂಟಿಕೊಳ್ಳುತ್ತದೆ. ಇದು ಮಾನವನ ಶ್ವಾಸನಾಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ.

ಈ ಕಿರೀಟದಂತಹ ಆಕಾರದಿಂದಲೇ ಕೊರೊನಾ ಎಂಬ ಹೆಸರೂ ಇದಕ್ಕೆ ಸಿದ್ಧಿಸಿದೆ. ಎಸ್‌ ಪ್ರೊಟೀನ್‌ನಲ್ಲಿ 12 ಜೆನೆಟಿಕ್ ಅಕ್ಷರಗಳಾದ ccucggcgggca ಇರುತ್ತದೆ. ಮಾನವನ ಕೋಶಗಳಿಗೆ ಬಿಗಿಯಾಗಿ ಕಚ್ಚಿಕೊಳ್ಳಲು ಈ ಮ್ಯುಟೇಶನ್‌ ಸಹಾಯ ಮಾಡುತ್ತದೆ. ಇದು ಬಾವಲಿ ಮತ್ತು ಇತರ ಜೀವಿಗಳಿಂದ ವೈರಸ್‌ ಬೆಳೆಯುವ ಪ್ರಕ್ರಿಯೆಯಲ್ಲಿ ಮಹತ್ವದ ಹಂತವಾಗಿದೆ. ಈ ಮಾನವನ ಕೋಶಗಳಿಗೆ ಹೊರಚಾಚುವಿಕೆಯು ಅಂಟಿಕೊಳ್ಳುವುದನ್ನು ತಡೆಯುವ ಕುರಿತು ವೈಜ್ಞಾನಿಕ ತಂಡಗಳು ಈಗ ಲಸಿಕೆಗಳಿಗೆ ಶೋಧ ನಡೆಸುತ್ತಿದ್ದಾರೆ. ಎನ್ವೆಲಪ್‌ ಪ್ರೊಟೀನ್ ಎಂಬುದು ಸ್ಟ್ರಕ್ಚರಲ್‌ ಪ್ರೊಟೀನ್ ಆಗಿದ್ದು, ವೈರಸ್‌ನ ತೈಲಭರಿತ ಗುಳ್ಳೆ ರೂಪುಗೊಳ್ಳಲು ಸಹಾಯ ಮಾಡುತ್ತದೆ.

ಕೊರೊನಾ ವೈರಸ್ ಸುತ್ತ ಇರುವ ಅಕ್ಸೆಸರಿ ಪ್ರೊಟೀನ್‌ಗಳು ಬಾಧಿತ ಕೋಶದ ಒಳಗಿನ ವಾತಾವರಣವನ್ನು ಬದಲಿಸಲು ಸಹಾಯ ಮಾಡುತ್ತವೆ. ಇದರಿಂದಾಗಿ, ವೈರಸ್‌ ಪುನರುತ್ಪಾದನೆಯಾಗುವುದು ಸುಲಭವಾಗುತ್ತದೆ. ಬಾಧಿತ ಕೋಶದ ಪೊರೆಯಲ್ಲಿ ರಂಧ್ರವನ್ನು ಒಆರ್‌ಎಫ್‌3ಎ ಪ್ರೊಟೀನ್ ಮಾಡುತ್ತದೆ. ಇದರಿಂದ ಹೊಸ ವೈರಸ್‌ಗಳು ಹೊರಗೆ ಹೋಗಲು ಸಹಾಯವಾಗುತ್ತದೆ. ಇದು ಊತಕ್ಕೂ ಕಾರಣವಾಗುತ್ತದೆ. ಇದು ಕೋವಿಡ್‌ 19 ರ ಅತ್ಯಂತ ಅಪಾಯಕಾರಿ ಗುಣಲಕ್ಷಣವಾಗಿದೆ. ಬಾಧಿತ ಕೋಶವು ರೋಗನಿರೋಧಕ ವ್ಯವಸ್ಥೆಗೆ ಕಳುಹಿಸುವ ಸಂಕೇತಗಳನ್ನು ಇನ್ನೊಂದು ಪ್ರೊಟೀನ್ ಒಆರ್‌ಎಫ್‌6 ತಡೆಯುತ್ತದೆ. ಅಷ್ಟೇ ಅಲ್ಲ, ಇದು ಕೋಶಗಳು ಹೊಂದಿರುವ ಸ್ವಯಂ ವೈರಸ್ ಹೋರಾಟದ ಪ್ರೊಟೀನ್ ಅನ್ನೂ ತಡೆಯುತ್ತದೆ.

ಇದು ಇತರ ವೈರಸ್‌ಗಳಾದ ಪೋಲಿಯೋ ಮತ್ತು ಇನ್‌ಫ್ಲುಯೆಂಜಾಗೂ ಕಾರಣವಾಗುತ್ತದೆ. ಹೊಸ ವೈರಸ್‌ಗಳು ಕೋಶದಿಂದ ಹೊರಹೋಗಲು ಪ್ರಯತ್ನಿಸಿದಾಗ, ಟೆಥ್ರೆನ್ ಎಂದು ಕರೆಯಲಾಗುವ ಪ್ರೊಟೀನ್‌ನಿಂದ ಕೋಶವು ನಿಯಂತ್ರಿಸುತ್ತದೆ. ಆದರೆ, ಬಾಧಿತ ಕೋಶದ ಟೆಥ್ರೆನ್‌ ಪೂರೈಕೆಯನ್ನು ಒಆರ್‌ಎಫ್‌7ಎ ಕಡಿಮೆ ಮಾಡುತ್ತದೆ. ಇದರಿಂದ ವೈರಸ್‌ ಹೊರಹೋಗಲು ಅನುವು ಮಾಡುತ್ತದೆ. ಬಾಧಿತ ಕೋಶವು ತನ್ನನ್ನು ತಾನೇ ನಿಷ್ಕ್ರಿಯ ಗೊಳಿಸಿಕೊಳ್ಳುವುದಕ್ಕೂ ಪ್ರೊಟೀನ್‌ ಪ್ರೋತ್ಸಾಹಿಸುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಕೊರೊನಾ ವೈರಸ್ ಜೀನ್‌ನ ಅಂಚಿನಲ್ಲಿ ಹರಿತವಾದ ಭಾಗ ಇರುತ್ತದೆ. ಇದು ಪ್ರೊಟೀನ್ ತಯಾರಿಕೆ ಯಂತ್ರದ ಕೋಶವನ್ನು ಸ್ಥಗಿತಗೊಳಿಸುತ್ತದೆ.

ABOUT THE AUTHOR

...view details