ಮುಂಬೈ: ಭೂಗತ ಪಾತಕಿ ಡಾನ್ ದಾವೂದ್ ಇಬ್ರಾಹಿಂ ಸಹಚರ, ಗ್ಯಾಂಗ್ಸ್ಟರ್ ತರಿಕ್ ಪರ್ವಿನ್ನನ್ನು ಹಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಡೊಂಗ್ರಿ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ, ಗ್ಯಾಂಗ್ಸ್ಟರ್ ತರಿಕ್ ಪರ್ವಿನ್ ಬಂಧನ - ಸಹಚರರಾದ ಎಜಾಜ್ ಲಕ್ಡಾವಾಲಾ, ಸಲೀಮ್ ನನ್ನು ಬಂಧಿಸಿದ್ದಾರೆ.
ಭೂಗತ ಪಾತಕಿ ಡಾನ್ ದಾವೂದ್ ಇಬ್ರಾಹಿಂನ ಸಹಚರ, ಗ್ಯಾಂಗ್ಸ್ಟರ್ ತರಿಕ್ ಪರ್ವಿನ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಹಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂ ಆಪ್ತ ತರಿಕ್ ಪರ್ವೀನ್ ನನ್ನು ಭಾನುವಾರ ಡೋಂಗ್ರಿಯಿಂದ ಬಂಧಿಸಲಾಗಿದೆ ಎಂದು ಮುಂಬೈನ ಜಂಟಿ ಪೊಲೀಸ್ ಆಯುಕ್ತ ಎಸ್. ರಾಸ್ತೋಗಿ ಹೇಳಿದ್ದಾರೆ.
ಇಜಾಜ್ ಯೂಸುಫ್ ಲಕ್ಡಾವಾಲಾ (ಈ ಹಿಂದೆ ಸುಲಿಗೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ) ಪರ್ವೀನ್ ಅವನಿಗೆ ಸುಲಿಗೆ ಮಾಡಲು ಸಹಾಯ ಮಾಡುತ್ತಿದ್ದನೆಂಬ ಆರೋಪದ ಮೇರೆಗೆ ಬಂಧಿಸಲಾಗಿದೆ. ಎಂಆರ್‌ಎ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಆಧಾರದ ಮೇಲೆ ತಾರಿಕ್ ಪರ್ವೀನ್ ಸೇರಿದಂತೆ, ಆತನ ಸಹಚರರಾದ ಎಜಾಜ್ ಲಕ್ಡಾವಾಲಾ, ಸಲೀಮ್ ನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.