ಕರ್ನಾಟಕ

karnataka

ETV Bharat / bharat

ಅಯೋಧ್ಯೆ ವಿವಾದ ನಡೆದು ಬಂದ ಹಾದಿ..!

ರಾಮಜನ್ಮಭೂಮಿ - ಬಾಬರಿ ಮಸೀದಿ ವಿವಾದ ನಡೆದು ಬಂದ ಹಾದಿಯ ಸಂಪೂರ್ಣ ಮಾಹಿತಿ

The RamJanabhumi-Babri Mosque controversy
ಅಯೋಧ್ಯೆ ವಿವಾದ ನಡೆದು ಬಂದ ಹಾದಿ

By

Published : Aug 3, 2020, 9:30 AM IST

1885: ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಮೊದಲ ಬಾರಿಗೆ ಕೋರ್ಟ್​ ಮೆಟ್ಟಿಲೇರಿತು.

ಡಿಸೆಂಬರ್ 23, 1949: ವಿಗ್ರಹಗಳನ್ನು ಕೇಂದ್ರ ಗುಮ್ಮಟದ ಕೆಳಗಿರಿಸಿದ ನಂತರ ವಿವಾದಕ್ಕೆ ತೀವ್ರ ಸ್ವರೂಪ.

ಜನವರಿ 16, 1950: ರಾಮಲಲ್ಲಾ ಪೂಜಿಸುವ ಹಕ್ಕುಗಳಿಗಾಗಿ ಗೋಪಾಲ್ ಸಿಂಗ್ ವಿಶಾರದ ಅವರಿಂದ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ.

ಡಿಸೆಂಬರ್ 05, 1950: ಪೂಜೆ ಮುಂದುವರೆಸಲು ಅವಕಾಶ ಕೋರಿ ಮಹಾಂತ ಪರಮಹಂಸ ರಾಮಚಂದ್ರ ದಾಸ್ ಕೇಸ್​​ ದಾಖಲು.

ಡಿಸೆಂಬರ್ 17, 1959: ವಿವಾದಿತ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಮೋಹಿ ಅಖಾರಾದಿಂದ ಮೊಕದ್ದಮೆ.

ಡಿಸೆಂಬರ್ 18, 1961: ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನಿಂದ ಭೂಮಿಯ ಮಾಲೀಕತ್ವದ ಪ್ರತಿಪಾದನೆ.

ಜುಲೈ 1, 1989:ರಾಮ ಲಲ್ಲಾ ವಿರಾಜಮಾನ್ ಹೆಸರಲ್ಲಿ 5ನೇ ಮೊಕದ್ದಮೆ.

ಅಯೋಧ್ಯೆ ವಿವಾದ ನಡೆದು ಬಂದ ಹಾದಿ

ಏಪ್ರಿಲ್ 2002: ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ಭೂಮಿಯ ಮಾಲೀಕತ್ವ ನಿರ್ಧಾರದ ವಿಚಾರಣೆ.

ಸೆಪ್ಟೆಂಬರ್ 30, 2010: ವಿವಾದಿತ ಭೂಮಿಯನ್ನು ರಾಮ ಲಲ್ಲಾ, ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ನಡುವೆ ವಿಭಜಿಸಿ ಲಖನೌ ನ್ಯಾಯಪೀಠದ ತೀರ್ಪು

ಮೇ 09, 2011:ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ.

ಮಾರ್ಚ್ 21, 2017:ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್ ಸೂಚನೆ.

ಡಿಸೆಂಬರ್ 05, 2017: ಸಿವಿಲ್ ಮೇಲ್ಮನವಿಗಳನ್ನು ಫೆಬ್ರವರಿ 08, 2018 ರಂದು ಆಲಿಸಲು ಸುಪ್ರೀಂ ನಿರ್ಧಾರ.

ಫೆಬ್ರವರಿ 08, 2018: ಅಯೋಧ್ಯೆಯ ವಿವಾದವನ್ನು ಭೂ ವಿವಾದ ಪ್ರಕರಣವಾಗಿ ಮಾತ್ರ ಪರಿಗಣಿಸುವಂತೆ ಸುಪ್ರೀಂ ಅಭಿಪ್ರಾಯ.

ಮೇ 09, 2019: ತ್ರಿಸದಸ್ಯರ ಮಧ್ಯಸ್ಥಿಕೆ ಸಮಿತಿಯಿಂದ ಸುಪ್ರೀಂಕೋರ್ಟ್‌ಗೆ ವರದಿ

ಅಕ್ಟೋಬರ್ 16, 2019: ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ.

ಅಕ್ಟೋಬರ್ 16, 2019: 40 ದಿನಗಳ ವಿಚಾರಣೆಯ ನಂತರ, ಸಂವಿಧಾನ ಪೀಠವು ತೀರ್ಪನ್ನು ಕಾಯ್ದಿರಿಸಿದೆ.

ನವೆಂಬರ್ 9, 2019:ಸುಪ್ರೀಂಕೋರ್ಟ್ ಭೂ ವಿವಾದವನ್ನು ಕೊನೆಗೊಳಿಸಿತು.

ABOUT THE AUTHOR

...view details