ಕರ್ನಾಟಕ

karnataka

ETV Bharat / bharat

ವೃದ್ಧ ದಂಪತಿಗೆ ಥಳಿತ ಆರೋಪ: ಮಾಜಿ ಶಾಸಕನ ಬಂಧನ - Harshvardhan Jadhav for allegedly beating up an elderly couple.

ಜಾಧವ್ ಮತ್ತು ಅವರ ಸಹೋದ್ಯೋಗಿ ಇಶಾ ಝಾ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ), 325, 323, 504 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾಜಿ ಶಾಸಕ ಹರ್ಷವರ್ಧನ್ ಜಾಧವ್
ಮಾಜಿ ಶಾಸಕ ಹರ್ಷವರ್ಧನ್ ಜಾಧವ್

By

Published : Dec 15, 2020, 7:11 PM IST

ಪುಣೆ (ಮಹಾರಾಷ್ಟ್ರ): ವೃದ್ಧ ದಂಪತಿಯನ್ನು ಥಳಿಸಿದ ಆರೋಪದ ಮೇಲೆ ಮಾಜಿ ಶಾಸಕ ಹರ್ಷವರ್ಧನ್ ಜಾಧವ್ ಅವರನ್ನು ಪುಣೆ ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಜಾಧವ್ ಮತ್ತು ಅವರ ಸಹೋದ್ಯೋಗಿ ಇಶಾ ಝಾ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ), 325, 323, 504 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಓದಿ:ಸಿಜೆಐನ ನಾಗ್ಪುರ ಮನೆಯ ಸುರಕ್ಷತೆಗಾಗಿ ₹1.77 ಕೋಟಿ ಮೀಸಲಿಟ್ಟ 'ಮಹಾ' ಸರ್ಕಾರ

ಚತುಶ್ರುಂಗಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಜಾಧವ್​ ಕಾರಿನ ಡೋರ್​ ತೆಗೆಯುವಾಗ ಅದು ವೃದ್ಧ ದಂಪತಿಯ ಬೈಕ್​ಗೆ ತಾಗಿದೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಜಾಧವ್​ ಮತ್ತು ಅವರ ಮಹಿಳಾ ಸಹೋದ್ಯೋಗಿ ವೃದ್ಧ ದಂಪತಿಯನ್ನು ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಜಯ್ ಚಡ್ಡಾ (55), ಮಮತಾ ಚಾಧಾ (48) ಹಲ್ಲೆಗೊಳಗಾದ ದಂಪತಿ ಎನ್ನಲಾಗಿದೆ.

ABOUT THE AUTHOR

...view details