ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಮುಖ್ಯ ಕಾರ್ಯದರ್ಶಿಗೂ ಕೊರೊನಾ ಸೋಂಕು ತಗುಲಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಇವತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಧಾನಭೆಯಲ್ಲಿ ಸಭೆ ನಡೆಸುತ್ತಿರುವಾಗಲೇ ಮುಖ್ಯ ಕಾರ್ಯದರ್ಶಿಗೆ ಕೊರೊನಾ ತಗುಲಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ವಿಧಾನಸಭೆಯ ಮುಖ್ಯ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್
ವಲಸೆ ಕಾರ್ಮಿಕರನ್ನು ಅವರ ಮೂಲಸ್ಥಳಗಳಿಗೆ ವಾಪಸ್ ಕಳುಹಿಸುವ ವಿಶೇಷ ವಿಭಾಗದ ಜವಾಬ್ದಾರಿ ಹೊತ್ತಿದ್ದ ಮುಖ್ಯ ಕಾರ್ಯದರ್ಶಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪ್ರಧಾನ ಕಾರ್ಯದರ್ಶಿಯ ಸಂಪರ್ಕಕ್ಕೆ ಬಂದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತು ಉಪಕಾರ್ಯದರ್ಶಿಗಳನ್ನು ಕ್ವಾರಂಟೈನ್ಗೆ ಕಳುಹಿಸಲಾಗಿದೆ.

ಕೇವಲ ಶೇ.5 ರಷ್ಟು ನೌಕರರನ್ನಿಟ್ಟುಕೊಂಡು ಸರ್ಕಾರದ ಪ್ರಮುಖ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ವಿಭಾಗಕ್ಕೆ ಕೊರೊನಾ ದಾಳಿಯಾಗಿರುವುದು ಸರ್ಕಾರಕ್ಕೆ ದಿಗಿಲು ಮೂಡಿಸಿದೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯಾವ ನಿರ್ಣಯ ಕೈಗೊಳ್ಳಲಿರುವರು ಎಂಬುದನ್ನು ಕಾದುನೋಡಬೇಕಿದೆ.