ಕರ್ನಾಟಕ

karnataka

ETV Bharat / bharat

ನಿರ್ಭಯಾ ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ - ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ

ಶಿಕ್ಷೆಗೆ ಎರಡು ದಿನ ಬಾಕಿಯಿರುವಾಗ ನಿರ್ಭಯಾ ಪ್ರಕರಣದ ಅಪರಾಧಿ ವಿನಯ್​ ಶರ್ಮಾ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ಇಂದು ಈ ಅರ್ಜಿಯನ್ನು ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ತಿರಸ್ಕರಿಸಿದ್ದಾರೆ.

The President of India rejects mercy plea of convict Vinay Sharma
ನಿರ್ಭಯಾ

By

Published : Feb 1, 2020, 11:00 AM IST

ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಓರ್ವ ಅಪರಾಧಿ ವಿನಯ್​ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ.

ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಪ್ರಕಾರ ಫೆ.1 ಅಂದರೆ ಇಂದು ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕಿತ್ತು. ಆದರೆ ಒಬ್ಬೊಬ್ಬರೇ ಅಪರಾಧಿಗಳು ವಿಳಂಬ ತಂತ್ರ ಅನುಸರಿಸಿ ಕಾನೂನಿನಡೆ ಬರುವ ಎಲ್ಲಾ ರೀತಿಯ ಅರ್ಜಿಗಳನ್ನು ಸಲ್ಲಿಸುತ್ತಾ ಬಂದಿದ್ದರು. ಇದರ ವಿಚಾರಣೆಗಳನ್ನು ನಡೆಸುತ್ತಾ ಬಂದಿದ್ದ ಸುಪ್ರೀಂ ಅರ್ಜಿಗಳ ವಿಚಾರಣೆ ನಡೆಸಿ ವಜಾ ಮಾಡುತ್ತಾ ಬಂದಿದೆ. ಶುಕ್ರವಾರ ದೆಹಲಿಯ ಪಟಿಯಾಲಾ ಹೌಸ್​ ಕೋರ್ಟ್​ ಮರಣದಂಡನೆಗೆ ತಡೆಯಾಜ್ಞೆ ನೀಡಿದ್ದು, ಗಲ್ಲು ಶಿಕ್ಷೆ ಮುಂದೂಡಿಕೆಯಾಗಿತ್ತು.

ಶಿಕ್ಷೆಗೆ ಎರಡು ದಿನ ಬಾಕಿಯಿರುವಾಗ ಅಪರಾಧಿ ವಿನಯ್​ ಶರ್ಮಾ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ಇಂದು ಇದನ್ನು ರಾಷ್ಟ್ರಪತಿ ರಾಮ್​ ನಾಥ್​ ಕೋವಿಂದ್​ ತಿರಸ್ಕರಿಸಿದ್ದಾರೆ.

ABOUT THE AUTHOR

...view details