ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟರ್ನಲ್ಲಿ ನಡೆಸುವ ಕ್ಯಾಪ್ಷನ್ (ಶೀರ್ಷಿಕೆ) ಕಾಂಪಿಟೇಷನ್ ಸಖತ್ ಫೇಮಸ್ ಆಗಿದೆ. ಆಗಾಗ ವಿಭಿನ್ನ ಫೋಟೋ ಹಾಕಿ ಉತ್ತಮ ಶೀರ್ಷಿಕೆ ನೀಡಿದವರಿಗೆ ಬಹುಮಾನ ಘೋಷಿಸುವ ಆನಂದ್ ಮಹಿಂದ್ರಾ ಅವರಿಗೆ ಟ್ವಿಟರ್ನಲ್ಲಿ 80 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಕಳೆದ ವಾರದ ಹಿಂದೆ ಕೋತಿಯೊಂದು ಡಿಟಿಹೆಚ್ ಸಂಪರ್ಕಿಸುವ ಛತ್ರಿಯ ಮೇಲೆ ಕುಳಿತಿರುವ ಫೋಟೋ ಟ್ವೀಟ್ ಮಾಡಿ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಒಂದೊಳ್ಳೆ ಕ್ಯಾಪ್ಷನ್ ನೀಡುವಂತೆ ತಿಳಿಸಿದ್ದರು. ಅಲ್ಲದೇ ಉತ್ತಮ ಶೀರ್ಷಿಕೆಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಇದೀಗ ಈ ಚಿತ್ರಕ್ಕೆ ಉತ್ತಮ ಕ್ಯಾಪ್ಷನ್ ನೀಡಿರುವ ಇಬ್ಬರ ಹೆಸರನ್ನು ಸೂಚಿಸಿ ಮತ್ತೆ ಟ್ವೀಟ್ ಮಾಡಿದ್ದಾರೆ.
ಮೇವರಿಕ್ ಹಾಗೂ ದೀಪಕ್ ಎಂಬ ಟ್ವಿಟರ್ ಅಕೌಂಟ್ ಹೊಂದಿರುವ ಇಬ್ಬರ ಕ್ಯಾಪ್ಷನ್ಗೆ ಬಹುಮಾನ ನೀಡುವುದಾಗಿ ಅವರು ಘೋಷಿಸಿದ್ದಾರೆ.