ಕರ್ನಾಟಕ

karnataka

ETV Bharat / bharat

ಅಸ್ತವ್ಯಸ್ತಗೊಂಡ ವ್ಯವಸ್ಥೆಗೊಂದು ಉತ್ತಮ ಔಷಧಿ: ಬೆಲೆ ಏರಿಕೆ ತಡೆಗೆ ಕೇಂದ್ರದ ನಿರ್ಧಾರ - ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ

ದೇಶಾದ್ಯಂತ ಅಸಂಖ್ಯಾತ ಜನರು, ಸಣ್ಣ ಪ್ರಮಾಣದ ಕಾಯಿಲೆಗಳಿಂದ ಹಿಡಿದು ದೀರ್ಘಾವಧಿಯ ಕಾಯಿಲೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಈಗ ಶಮನಕ್ಕೆ ಕೈಗೆಟಕುವ ಔಷಧ ಕೇಳುತ್ತಿದ್ದಾರೆ. ಔಷಧಿ ಮತ್ತು ಔಷಧ ಮಾರುಕಟ್ಟೆಯು ಔಷಧೀಯ ದರಗಳಲ್ಲಿ ಸುಮಾರು ಶೇ.80ರಷ್ಟು ಕುಸಿತವನ್ನು ನಿರೀಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಔಷಧಿಗಳ ಬೆಲೆ ಏರಿಕೆಯನ್ನು ತಡೆಯುವ ಕೇಂದ್ರ ಸರ್ಕಾರದ ಈ ನಿರ್ಧಾರ  ಶ್ಲಾಘನೀಯ.

the-perfect-solution-from-the-center-to-the-discomfort
ಅಸ್ವಸ್ಥತೆಗೆ ಕೇಂದ್ರದಿಂದ ಪರಿಪೂರ್ಣ ಪರಿಹಾರ!

By

Published : Dec 3, 2019, 9:11 PM IST

ಅಸ್ತವ್ಯಸ್ತಗೊಂಡ ವ್ಯವಸ್ಥೆಗೊಂದು ಉತ್ತಮ ಔಷಧಿ !

ದೇಶಾದ್ಯಂತ ಅಸಂಖ್ಯಾತ ಜನರು, ಸಣ್ಣ ಪ್ರಮಾಣದ ಕಾಯಿಲೆಗಳಿಂದ ಹಿಡಿದು ದೀರ್ಘಾವಧಿಯ ಕಾಯಿಲೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಈಗ ಶಮನಕ್ಕೆ ಕೈಗೆಟಕುವ ಔಷಧ ಕೇಳುತ್ತಿದ್ದಾರೆ! ಔಷಧಿ ಮತ್ತು ಔಷಧ ಮಾರುಕಟ್ಟೆಯು ಔಷಧೀಯ ದರಗಳಲ್ಲಿ ಸುಮಾರು ಶೇ.80ರಷ್ಟು ಕುಸಿತವನ್ನು ನಿರೀಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಔಷಧಿಗಳ ಬೆಲೆ ಏರಿಕೆಯನ್ನು ತಡೆಯುವ ಕೇಂದ್ರ ಸರ್ಕಾರದ ಈ ನಿರ್ಧಾರ ಶ್ಲಾಘನೀಯ.

ಅಂಕಿ-ಅಂಶಗಳ ಪ್ರಕಾರ, ಭಾರತ ಸರ್ಕಾರದ ಕೇಂದ್ರ ಔಷಧ ನಿಯಂತ್ರಕ ಮಂಡಳಿಯ ನಿಯಂತ್ರಿತ ಬೆಲೆಗೆ ಒಳಪಡದ ಸುಮಾರು 10,000 ನಿಗದಿತ ಔಷಧಿಗಳು ಮಾರುಕಟ್ಟೆಯಲ್ಲಿವೆ. ವಿಟಮಿನ್ ಮಾತ್ರೆಗಳಿಂದ ಹಿಡಿದು ಪ್ರತಿ ಜೀವಕಗಳವರೆಗೂ ಈ 10,000 ಔಷಧಿಗಳ ಪಟ್ಟಿಯಲ್ಲಿವೆ. ಔಷಧಿಗಳ ಮೇಲಿನ ತಮ್ಮ ಲಾಭವು ಶೇ.30ಕ್ಕಿಂತ ಮೀರಬಾರದು ಎಂಬ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಔಷಧ ತಯಾರಕರು ಮತ್ತು ಪೂರೈಕೆದಾರರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಬಳಸುವ ದುಬಾರಿ ಔಷಧಿಗಳ ಮೇಲೆ ಮಾರಾಟಗಾರರು ಸುಮಾರು ಶೇ.30ರಷ್ಟು ಲಾಭ ಪಡೆಯುತ್ತಾರೆ. ದುಬಾರಿ ಔಷಧಿಗಳ ಮೇಲೆ ಎನ್‌ಪಿಪಿಎಯ(ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ) ನಿರ್ಬಂಧದ ಬಳಿಕ ಇತರ ಔಷಧಿಗಳ ಮೇಲಿನ ಬೇಡಿಕೆ ಸ್ವಾಭಾವಿಕವಾಗಿ ಹೆಚ್ಚಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಒಐ ಮತ್ತು ಎನ್‌ಪಿಪಿಎಗಳು ತಿಂಗಳುಗಟ್ಟಲೆ ಒಟ್ಟಿಗೆ ಮಾಡಿದ ಕಸರತ್ತಿನ ಪರಿಣಾಮವಾಗಿ ನಿಯಮಿತ ಮತ್ತು ಸಾಮಾನ್ಯ ಔಷಧೀಯ ವಿಭಾಗಗಳಲ್ಲಿ ಲಾಭವನ್ನು ನಿಯಂತ್ರಣ ಸಾಧ್ಯವಾಗಿದೆ. ಅಪರೂಪದ ಕಾಯಿಲೆಗಳಿಗಾಗಿ ಹೊಸ ಪೇಟೆಂಟ್ ಪಡೆದ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲ್ಪಟ್ಟ ಮೊದಲ 5 ವರ್ಷ ನಿಯಂತ್ರಕ ಬೆಲೆಗಳ ಅಡಿಯಲ್ಲಿ ಪೂರೈಸಬೇಕಾಗಿಲ್ಲ ಎಂದು ಔಷಧ ಇಲಾಖೆ ಈ ವರ್ಷದ ಆರಂಭದಲ್ಲಿ ಅಧಿಸೂಚನೆ ಹೊರಡಿಸಿತ್ತು. ಪೇಟೆಂಟ್ ಔಷಧಿಗಳನ್ನು ನಿಯಂತ್ರಣದ ವ್ಯಾಪ್ತಿಗೆ ತರುವುದು ಗಂಭೀರ ಅಪರಾಧ ಎಂದು ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಅಂತಹ ವಿನಾಯಿತಿಗಳ ಅಗತ್ಯವಿಲ್ಲದೆ ಎಲ್ಲಾ ಔಷಧಿಗಳ ಬೆಲೆಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಅನುದಾನ ನೀಡಿದರೆ ಗ್ರಾಹಕರಿಗೆ ಪ್ರಯೋಜನಕಾರಿಯಾಗುತ್ತದೆ.

ಅತ್ಯಂತ ತುರ್ತು ಮತ್ತು ಜೀವ ಉಳಿಸುವ ಔಷಧೀಯ ವಲಯಗಳಲ್ಲಿ ಇಂದು ಮೂಲ ಔಷಧಿಗಳ ಬದಲಿಗೆ ಹಲವಾರು ಕಲಬೆರಕೆ ಔಷಧಿಗಳು ಲಭ್ಯವಿದೆ. ಮಲೇರಿಯಾ ಮತ್ತು ನ್ಯುಮೋನಿಯಾ ಚಿಕಿತ್ಸೆಯಲ್ಲಿ ನಕಲಿ ಔಷಧಿಗಳ ಬಳಕೆಯಿಂದ, ವಾರ್ಷಿಕವಾಗಿ ಎರಡೂವರೆ ದಶಲಕ್ಷ ಶಿಶುಗಳು ಮರಣ ಹೊಂದುತ್ತಿವೆ ಎಂಬುದು ಆಘಾತಕಾರಿ ಸಂಗತಿ. 2008ರ ಸುಮಾರಿಗೆ 75 ದೇಶಗಳಲ್ಲಿ ಸುಮಾರು 29 ನಕಲಿ ಔಷಧಿಗಳು ಪತ್ತೆಯಾಗಿತ್ತು. ಹತ್ತು ವರ್ಷಗಳ ಅವಧಿಯಲ್ಲಿ, ನಕಲುಗಳ ಪಟ್ಟಿ 95ಕ್ಕೆ ಏರಿದೆ ಮತ್ತು ಇದರಿಂದ ಬಾಧಿತ ರಾಷ್ಟ್ರಗಳ ಸಂಖ್ಯೆ 113ಕ್ಕೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಏರಿದಂತೆ ಕಣ್ಣುಗಳು ಅರಳುತ್ತಿವೆ. ಭಾರತ ಮತ್ತು ಚೀನಾದಲ್ಲಿ ಈ ನಕಲಿ ಔಷಧಿಗಳ ಉತ್ಪಾದನೆ ಹೆಚ್ಚಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ನಕಲಿ ಔಷಧಿಗಳ ಮಾರಾಟ ಮಾಡಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಯುರೋಪಿಯನ್ ರಾಷ್ಟ್ರಗಳು 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತಿವೆ. ಈ ಪ್ರದೇಶವು ಮಾದಕ ವ್ಯಸನಿಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಇದು ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ವಿತರಿಸಲಾಗುವ ಸುಮಾರು ಶೇ.11ರಷ್ಟು ಔಷಧಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ. ಭಾರತದಲ್ಲಿ ನಕಲಿ ಔಷಧೀಯ ಉದ್ಯಮಕ್ಕೆ ಸಂಬಂಧಿಸಿದಂತೆ ಸುಮಾರು 30 ಸಾವಿರ ಕೋಟಿ ರೂ. ಅಕ್ರಮ ವಹಿವಾಟು ನಡೆಸಲಾಗುತ್ತಿದೆ ಎಂದು ಅಸ್ಸೋಚಾಮ್ (ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆಫ್ ಇಂಡಿಯಾ) ಸುಮಾರು 4 ವರ್ಷಗಳ ಹಿಂದೆ ಹೇಳಿತ್ತು. ವಾಸ್ತವವಾಗಿ, ಮಾಶೆಲ್ಕರ್ ಸಮಿತಿಯು ವೈದ್ಯಕೀಯ ಕ್ಷೇತ್ರದಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿಯಲು ಅಗತ್ಯವಾದ ವ್ಯವಸ್ಥಿತ ಕ್ರಮವನ್ನು ಈ ಹಿಂದೆ ವಿವರಿಸಿದೆ. ತಕ್ಷಣದ ಕ್ರಮಗಳ ಕೊರತೆಯು ಕಾನೂನುಬಾಹಿರ ಮತ್ತು ಸಾಮಾಜಿಕ ವಿರೋಧಿ ಅಂಶಗಳಿಗೆ ಪೂರಕವಾಗಿದ್ದು, ದುಷ್ಕೃತ್ಯಗಳ ಮೇಲೆ ನಿಯಂತ್ರಣವಿಲ್ಲದೆ ಬೆಳೆಯಲು ಕಾರಣವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಕಲಿ ಔಷಧಿಗಳನ್ನು ತಪ್ಪಿಸಲು ಮತ್ತು ನಿಯಂತ್ರಿಸಲು ಬ್ಲಾಕ್-ಚೈನ್ ತಂತ್ರಜ್ಞಾನವು ಸಹಕಾರಿಯಾಗಿದೆ. ನಕಲು ಮಾಡುವಿಕೆಯ ಈ ಸಂಪೂರ್ಣ ಅಭ್ಯಾಸವನ್ನು ಪೂರ್ತಿ ನಿಯಂತ್ರಣಕ್ಕೆ ತರಲು ಇಂತಹ ಹೆಚ್ಚಿನ ಕ್ರಮಗಳ ಕಾರ್ಯಗತಗೊಳಿಸುವಿಕೆ ಇನ್ನು ಮುಂದಾದರೂ ವಿಳಂಬವಾಗಬಾರದು. ಭಾರತೀಯ ಔಷಧೀಯ ಉದ್ಯಮವನ್ನು ಸ್ವಚ್ಛಗೊಳಿಸಲು ಮತ್ತು ವಿಶೇಷವಾಗಿ ಚಿಕಿತ್ಸೆಗಾಗಿ ಅವರು ಅವಲಂಬಿಸಿರುವ ಔಷಧಿಗಳಿಗೆ ಸಂಬಂಧಿಸಿದಂತೆ ಗ್ರಾಹಕರು ಸುರಕ್ಷಿತವಾಗಿರಲು, ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯನ್ನು ತಕ್ಷಣದಿಂದ ಜಾರಿಗೆ ತರುವುದು ಕಡ್ಡಾಯವಾಗಿದೆ !

ಸಾಮಾನ್ಯ ಔಷಧಿಗಳು ಮಾತ್ರ ದೇಶದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದರೆ, ಬಡ ರೋಗಿಗಳು ಈಗ ಅದರ ಪ್ರಯೋಜನ ಪಡೆಯುತ್ತಿದ್ದರು. ಸಾಮಾನ್ಯ ಔಷಧೀಯ ಮಳಿಗೆಗಳು ಅಗ್ಗದ ಔಷಧೀಯ ಸೇವೆಗಳಿಗೆ ಹೆಸರುವಾಸಿಯಾಗಿವೆ. ಐದು ಸಾವಿರಕ್ಕೂ ಹೆಚ್ಚು ಸಾಮಾನ್ಯ ಔಷಧಾಲಯಗಳು ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ನೀಡುತ್ತಿವೆ ಎಂದು ಕೇಂದ್ರ ಮೂಲಗಳು ತಿಳಿಸಿವೆ. ದುರಂತವೆಂದರೆ ಅಧಿಕೃತ ಪ್ರಕಟಣೆಗಳು ಮತ್ತು ವಾಸ್ತವದ ನಡುವೆ ದೊಡ್ಡ ಅಂತರವಿದೆ! ಅಧ್ಯಯನದ ವರದಿಗಳ ಪ್ರಕಾರ, ಅಮೆರಿಕದಲ್ಲಿ ಮುಕ್ಕಾಲು ಭಾಗದಷ್ಟು ವೈದ್ಯರು ಮತ್ತು ಬ್ರಿಟನ್‌ನಲ್ಲಿ ಅದಕ್ಕಿಂತ ಹೆಚ್ಚು ವೈದ್ಯರು ಸಾಮಾನ್ಯ ಔಷಧಿಗಳನ್ನು ಶಿಫಾರಸು ಮಾಡುತ್ತಿದ್ದಾರೆ. ಅತ್ಯಂತ ಆಸಕ್ತಿದಾಯಕ ಅಂಶವೆಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯ ಔಷಧಿಗಳ ಪೂರೈಕೆದಾರ ಭಾರತ. ಭಾರತದ ಔಷಧ ರಫ್ತಿನ ಸುಮಾರು ಶೇ.30ರಷ್ಟು ಅಮೆರಿಕಕ್ಕೆ, 19% ಆಫ್ರಿಕಾ ಮತ್ತು 16% ಯುರೋಪಿಯನ್ ದೇಶಗಳಿಗೆ ಹೋಗುತ್ತದೆ. ರಷ್ಯಾ, ನೈಜೀರಿಯಾ, ಬ್ರೆಜಿಲ್ ಮತ್ತು ಜರ್ಮನಿಗಳಿಗೆ ಭಾರತದಿಂದ ಔಷಧ ರಫ್ತಾಗುತ್ತದೆ.ದೇಶೀಯವಾಗಿ ಸಾಮಾನ್ಯ ಔಷಧಿ ಬಳಕೆಯ ಅರಿವಿನ ವೈಫಲ್ಯಕ್ಕೆ ವಿವಿಧ ಅಂಶಗಳು ಕಾರಣವಾಗಿವೆ. ಹೆಚ್ಚಿನ ಸಮಯಗಳಲ್ಲಿ, ಜನರು ಉದ್ದೇಶಪೂರ್ವಕವಾಗಿ ಔಷಧಿ ಉತ್ಪಾದನೆಯ ಬಳಕೆ ಮತ್ತು ಗುಣಮಟ್ಟವನ್ನು ತಪ್ಪಾಗಿ ಅರ್ಥೈಸುತ್ತಾರೆ. ಇದು ವ್ಯಾಪಾರಸ್ಥರು, ವೈದ್ಯರು, ಆಸ್ಪತ್ರೆಗಳು ಮತ್ತು ಮುಕ್ತ ಮಾರುಕಟ್ಟೆಯಲ್ಲಿರುವ ಇತರ ಲಾಭದ ಪಾಲುದಾರರಿಗೆ ಮಾತ್ರ ಸಹಕಾರಿಯಾಗಿದೆ.

ಎನ್‌ಪಿಪಿಎ, ಈ ಹಿಂದೆ ರಾಷ್ಟ್ರದ ರಾಜಧಾನಿ ನವದೆಹಲಿಯ ನಾಲ್ಕು ಪ್ರಮುಖ ಚಿಕಿತ್ಸಾಲಯಗಳ ಬಗ್ಗೆ ವರದಿಯೊಂದನ್ನು ಹೊರತಂದಿದ್ದು, ಅವು ದುಬಾರಿಯಲ್ಲ ಔಷಧಿಗಳ ಮೇಲೆ ಸುಮಾರು ಶೇ.160-1200 ಮತ್ತು ನಿಯಂತ್ರಣಕ್ಕೆ ಒಳಪಡದ ಔಷಧಿಗಳಿಂದ ಶೇ.115-360ರಷ್ಟು ಲಾಭ ಗಳಿಸುತ್ತಿವ ಎಂದು ಉಲ್ಲೇಖಿಸಿತ್ತು. ತಲೆಮಾರುಗಳಿಂದ ದೇಶಾದ್ಯಂತ ಹರಡಿರುವ ಲೂಟಿ ಪ್ರಕ್ರಿಯೆಯು ಅನೇಕ ಕುಟುಂಬಗಳು ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಪರದಾಡುವಂತೆ ಮಾಡುತ್ತಿದೆ.

ರೋಗಿಯ ಚಿಕಿತ್ಸಾ ವೆಚ್ಚದ ಶೇ.70ರಷ್ಟು ಔಷಧ ವೆಚ್ಚವಾಗುವ ದೇಶದಲ್ಲಿ ಸಾರ್ವತ್ರಿಕ ಉತ್ಪನ್ನಗಳ ವ್ಯಾಪಕ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ಕ್ರಮಗಳನ್ನು ಜಾರಿಗೆ ತರಲು ಸೂಕ್ತ ಸಮಯವಾಗಿದೆ. ಇದರಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಖಾಸಗಿ ಕಂಪನಿಗಳ ಔಷಧ ಬೆಲೆಗಳನ್ನು ಅಧಿಕೃತವಾಗಿ ನಿಯಂತ್ರಿಸುವುದು ಸೇರಿದಂತೆ ನಕಲಿಗಳಿಗೆ ಕಡಿವಾಣ ಹಾಕುವುದು ಸೇರಿದೆ. ಈ ಸಂಪೂರ್ಣ ಕ್ರಮದ ಒಟ್ಟಾರೆ ಕಾರ್ಯಚಟುವಟಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಭಾಗವಹಿಸುವಿಕೆ ಬಡವರ ಆರೋಗ್ಯ ಮತ್ತು ಚಿಕಿತ್ಸೆಯ ಮೂಲಭೂತ ಹಕ್ಕನ್ನು ಕಾಪಾಡಬಲ್ಲದು! ಒಮ್ಮೆ, ರೋಗಪೀಡಿತ ಈ ವ್ಯವಸ್ಥೆಯು ಚಿಕಿತ್ಸೆ ಪಡೆದರೆ, ಆರೋಗ್ಯಕರ ರಾಷ್ಟ್ರದ ನಮ್ಮ ಆಶಯದ ದಾರಿ ದೂರವಿರುವುದಿಲ್ಲ.

For All Latest Updates

TAGGED:

ABOUT THE AUTHOR

...view details