ಕೋಯಿಕ್ಕೋಡ್: ನಿನ್ನೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದ ವಿಮಾನ ದುರಂತದಲ್ಲಿ ಪುಟ್ಟ ಕಂದಮ್ಮನನ್ನು ರಕ್ಷಿಸಲಾಗಿತ್ತು. ಆದರೆ, ಮಗುವಿನ ಪೋಷಕರು ನಾಪತ್ತೆಯಾಗಿದ್ದರು. ಇದೀಗ ಮಗು ಮರಳಿ ತನ್ನ ಹೆತ್ತವರ ಮಡಿಲು ಸೇರಿದೆ.
ವಿಮಾನ ದುರಂತದ ವೇಳೆ ಕಾಣೆಯಾಗಿದ್ದ ಮಗುವಿನ ಪೋಷಕರು ಪತ್ತೆ - ವಿಮಾನ ದುರಂತ
ಕೋಯಿಕ್ಕೋಡ್ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಗುವೊಂದನ್ನು ರಕ್ಷಿಸಲಾಗಿತ್ತು. ಇದೀಗ ಅಪಘಾತದಲ್ಲಿ ಬದುಕುಳಿದಿರುವ ಕಂದಮ್ಮನ ಪೋಷಕರು ಸಿಕ್ಕಿದ್ದಾರೆ.
ನಾಗರಿಕ ಪೊಲೀಸ್ ಅಧಿಕಾರಿ ಸಬೀರ್ ಅಲಿ ಅಪಘಾತದ ಸ್ಥಳದಿಂದ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮಗುವಿನ ಪೋಷಕರನ್ನು ಹುಡುಕಲು ಮಗುವಿನ ಫೋಟೋ ಮತ್ತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಜೊತೆಗೆ ಸಂಪರ್ಕಿಸಲು ದೂರವಾಣಿ ಸಂಖ್ಯೆಯನ್ನು ನೀಡಲಾಗಿತ್ತು. ಈ ಮೂಲಕ ವಿಮಾನ ಅಪಘಾತದಲ್ಲಿ ಬದುಕುಳಿದಿರುವ ಕಂದಮ್ಮನ ಪೋಷಕರು ಸಿಕ್ಕಿದ್ದಾರೆ.
ವಂದೇ ಭಾರತ್ ಮಿಷನ್ ಅಡಿ ನಿನ್ನೆ ದುಬೈನಿಂದ ಕೇರಳಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ವೇನಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿದಂತೆ 19 ಮಂದಿ ಮೃತಪಟ್ಟಿದ್ದು, ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.