ಶ್ರೀನಗರ: ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಕೌಸರ್ ರಿಯಾಜ್ ಮತ್ತು ಪುತ್ರ ಅಕ್ವಿಬ್ ರಿಯಾಜ್ ಸೋಫಿ ತಮ್ಮ ಬೇಕರಿ ಅಂಗಡಿಗೆ ಹೋಗುತ್ತಿದ್ದರು. ಈ ವೇಳೆ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದ್ದು, ಕೌಸರ್ ರಿಯಾಜ್ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿ 45 ವರ್ಷದ ಕೌಸರ್ ರಿಯಾಜ್ ಮತ್ತು ಆಕೆಯ ಪುತ್ರ ಅಕ್ವಿಬ್ ರಿಯಾಜ್ ಸೋಫಿ ಬೇಕರಿಗೆ ಹೋಗುತ್ತಿದ್ದರು. ಈ ವೇಳೆ ಭದ್ರತಾ ಪಡೆ ಸಿಬ್ಬಂದಿಯನ್ನು ನೋಡಿ, ಕೌಸರ್ ತಮ್ಮ ಮಗನಿಗೆ ಕಾರನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದಾರೆ. ಅವರು ಕಾರನ್ನು ಯು-ಟರ್ನ್ ಹೊಡೆಯುತ್ತಿರುವಾಗ ಸಿಬ್ಬಂದಿ ಕೂಡಲೇ ಕಾರಿನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ್ದಾರೆ. ಪರಿಣಾಮ ಗುಂಡಿನ ದಾಳಿಗೆ ಕೌಸರ್ ಸಾವನ್ನಪ್ಪಿದ್ದಾರೆ.
ಅಕ್ವಿಬ್ ತಾಯಿಯೂ ರಕ್ತಸ್ರಾವದಿಂದ ಬಳಲುತ್ತಿರುವುದನ್ನು ನೋಡಿದ ಅವರು ತಮ್ಮ ಸ್ಯಾಂಟ್ರೊ ಕಾರನ್ನು ನಿಲ್ಲಿಸಿ, ತಾಯಿಯ ತಲೆಯ ಹಿಂಭಾಗಕ್ಕೆ ಗುಂಡು ಬಿದ್ದಿದೆಯೇ ಇಲ್ಲವೇ ಎಂದು ನೋಡಿದ್ದಾರೆ. “ಭದ್ರತಾ ಪಡೆಗಳನ್ನು ನೋಡಿದ ಕೂಡಲೇ, ನನ್ನ ತಾಯಿ ಭಯಭೀತರಾಗಿದ್ದರು ಮತ್ತು ಹಿಂದೆ ಸರಿಯುವಂತೆ ಹೇಳಿದರು. ಕೆಲವೇ ನಿಮಿಷಗಳಲ್ಲಿ ನಮ್ಮ ಮೇಲೆ ಗುಂಡು ಹಾರಿಸಲಾಯಿತು. ಕಾರಿನ ಹಿಂಭಾಗದ ವಿಂಡ್‌ಶೀಲ್ಡ್ ಮೂಲಕ ಗುಂಡುಗಳು ನನ್ನ ತಾಯಿಯ ತಲೆಗೆ ಬಿದ್ದಿವೆ ”ಎಂದು 25 ವರ್ಷದ ಅಕ್ವಿಬ್ ಈಟಿಬಿ ಭಾರತ್‌ಗೆ ತಿಳಿಸಿದ್ದಾರೆ.