ಲಖನೌ:ಅಯೋಧ್ಯೆಯಲ್ಲಿ ಜನವರಿ 26 ರಿಂದ ಮಸೀದಿ ನಿರ್ಮಾಣ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮ ತುಂಬಾ ಸರಳವಾಗಲಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಕಾರ್ಯದರ್ಶಿ ಅಥರ್ ಹುಸೇನ್ ಭಾನುವಾರ ಹೇಳಿದ್ದಾರೆ. ಈ ಸಂದರ್ಭ ಮಂಡಳಿಯ ಎಲ್ಲ 9 ಸದಸ್ಯರು ಉಪಸ್ಥಿತರಿರುತ್ತಾರೆ. ಭಾನುವಾರ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್‌ನ ವರ್ಚುಯಲ್ ಸಭೆ ಇತ್ತು. ಅದರಲ್ಲಿ ಎಲ್ಲ ಒಂಬತ್ತು ಟ್ರಸ್ಟಿಗಳು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ವಹಿಸಿದ್ದರು. ಅಯೋಧ್ಯಾ ಜಿಲ್ಲಾ ಮಂಡಳಿಯ ಅನುಮೋದನೆ ಮತ್ತು 5 ಎಕರೆ ಜಮೀನಿನ ಮಣ್ಣಿನ ಪರೀಕ್ಷೆ ಪ್ರಕ್ರಿಯೆಯನ್ನು ಜನವರಿ 23 ರಿಂದ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ ಎಂದು ಅಥರ್ ಹುಸೇನ್ ಹೇಳಿದ್ದಾರೆ
ಮಸೀದಿ ಭೂಮಿಯಲ್ಲಿ ಧ್ವಜಾರೋಹಣ: