ಜೆಮ್‌ಶೇಡ್‌ಪುರ(ಝಾರ್ಖಂಡ್) :ಅಯೋಧ್ಯೆಯ ರಾಮ ದೇವಾಲಯದ ಭೂಮಿ ಪೂಜೆಗೆ ಸ್ವರ್ಣರೇಖಾ ಮತ್ತು ಖಾರ್ಕೈ ನದಿಗಳ ಸಂಗಮದ ಪವಿತ್ರ ನೀರು ಮತ್ತು ಮಣ್ಣನ್ನು ಬಳಸಲಾಗುತ್ತಿದೆ. ಪೂರ್ವಸಿಂಗ್ ಭೂಮಿಯಿಂದ ಐದು ಲೀಟರ್ ಪವಿತ್ರ ನೀರು ಮತ್ತು ಮಣ್ಣನನ್ನು ಅಯೋಧ್ಯೆಗೆ ಕಳುಹಿಸಲಾಗಿದೆ.
ರಾಮ ದೇವಾಲಯದ ಭೂಮಿ ಪೂಜೆ.. ಸ್ವರ್ಣರೇಖಾ, ಖಾರ್ಕೈ ನದಿಗಳ ನೀರು ಬಳಕೆ - The holy water for Ram Temple
ಪವಿತ್ರ ನೀರು ಮತ್ತು ಮಣ್ಣನ್ನು ಜುಲೈ 25ರವರೆಗೆ ಸಂಗ್ರಹಿಸಲಾಯಿತು. ಜುಲೈ 26ರಂದು ರಾಂಚಿಯಿಂದ ಅಯೋಧ್ಯೆಯ ರಾಮ ದೇವಾಲಯದ ಭೂಮಿ ಪೂಜೆಯಲ್ಲಿ ಬಳಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಅವತಾರ್ ಸಿಂಗ್ ಮಾಹಿತಿ ನೀಡಿದರು..
ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ಸ್ವರ್ಣ ರೇಖಾ, ಖಾರ್ಕೈ ನದಿಗಳ ಸಂಗಮದ ಪವಿತ್ರ ನೀರನ್ನು ತೆಗೆದುಕೊಂಡು ಬರುತ್ತಿವೆ. ಇದಕ್ಕೂ ಮೊದಲು ಧಾರ್ಮಿಕ ಗುರುಗಳು ಮಂತ್ರಗಳ ಪಠಣ ಸೇರಿ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಿದರು.
ಪವಿತ್ರ ನೀರು ಮತ್ತು ಮಣ್ಣನ್ನು ಜುಲೈ 25ರವರೆಗೆ ಸಂಗ್ರಹಿಸಲಾಯಿತು. ಜುಲೈ 26ರಂದು ರಾಂಚಿಯಿಂದ ಅಯೋಧ್ಯೆಯ ರಾಮ ದೇವಾಲಯದ ಭೂಮಿ ಪೂಜೆಯಲ್ಲಿ ಬಳಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಅವತಾರ್ ಸಿಂಗ್ ಮಾಹಿತಿ ನೀಡಿದರು. ಅಯೋಧ್ಯೆಯ ರಾಮ ದೇವಸ್ಥಾನದ ಭೂಮಿ ಪೂಜೆ ಅಗಸ್ಟ್ 5ರಂದು ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದಾರೆ.