ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):‘ಶ್ರೀನಗರದ ರತ್ನ’ ಎಂದು ಖ್ಯಾತಿ ಪಡೆದಿರುವ ದಾಲ್ ಸರೋವರವು, ಕಾಶ್ಮೀರದ ಎರಡನೆಯ ದೊಡ್ಡ ಸರೋವರವಾಗಿದೆ. ಇಲ್ಲಿನ ರಮ್ಯವಾದ ನಿಸರ್ಗ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಇಲ್ಲಿ ದೋಣಿ ಮನೆಗಳ ಮೇಲೆ ಕುಳಿತು ನೋಡಬಹುದಾದ ಸೂರ್ಯಾಸ್ತದ ದೃಶ್ಯವು ಬಹಳ ಸುಂದರವಾಗಿರುತ್ತದೆ. ಆದರೆ ಇತ್ತೀಚೆಗೆ ಪ್ರವಾಸೋದ್ಯಮವು ಕುಂಟಿತವಾಗುತ್ತಿದ್ದು, ಅಂತಹ ಐತಿಹಾಸಿಕ ಪರಂಪರೆ ಇದೀಗ ಅಳಿವಿನ ಅಂಚಿನಲ್ಲಿದೆ. ವ್ಯವಹಾರವಿಲ್ಲದೇ ದೋಣಿಮನೆಗಳ ಮಾಲೀಕರು ಸಂಕಷ್ಟದಲ್ಲಿದ್ದಾರೆ.
ನುರಿತ ಬಡಗಿಗಳು ಈ ದೋಣಿಗಳನ್ನು ತಯಾರಿಸಲು, ಒಂದು ವರ್ಷಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ತೇಲುವ ಈ ದೋಣಿಗಳು ಕಾಶ್ಮೀರದ ಪರಂಪರೆಯನ್ನು ಮತ್ತು ಕುಶಲಕರ್ಮಿಗಳ ಕೌಶಲ್ಯವನ್ನು ತೋರಿಸುತ್ತವೆ. ದಾಲ್ ಸರೋವರದಲ್ಲಿ ದೋಣಿಯಾನ ಮಾಡುವುದೇ ಪರಮಾನಂದದ ವಿಷಯವಾಗಿದ್ದು, ಅಂತಹ ವಿನ್ಯಾಸಗಳನ್ನು ದೋಣಿಗಳಲ್ಲಿ ಮಾಡಿರುತ್ತಾರೆ.
1838 ರಲ್ಲಿ ಬ್ರಿಟಿಷ್ ಅಧಿಕಾರಿಗಳು ರಜಾ ದಿನಗಳಲ್ಲಿ, ಕಾಶ್ಮೀರಕ್ಕೆ ಬರಲು ಪ್ರಾರಂಭಿಸಿದರು. ಇದು ಈ ಪ್ರದೇಶದ ಪ್ರವಾಸೋದ್ಯಮದ ಆರಂಭಕ್ಕೆ ಕಾರಣವಾಯಿತು. ಆ ಅಧಿಕಾರಿಗಳು ದಾಲ್ ಸರೋವರದ ಹೌಸ್ ಬೋಟ್‌ಗಳ ಒಳಗೆ ಇರುತ್ತಿದ್ದರು. ಆದರೆ ಈ ತೇಲುವ ದೋಣಿಗಳು ಈಗಿನ ದಿನಗಳಲ್ಲಿ ನೋಡುತ್ತಿರುವಷ್ಟು ಹಳೆಯ ದಿನಗಳಲ್ಲಿ ಭವ್ಯವಾಗಿರಲಿಲ್ಲ.