ಮುಂಬೈ:ಬುಧವಾರ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಆಸ್ಪತ್ರೆ ಆವರಣದಲ್ಲಿ ಪ್ರವಾಹದ ನೀರು... ಸ್ಟ್ರೆಚರ್ ಮೇಲೆ ಕುಳಿತು ಕೋವಿಡ್ ಸೆಂಟರ್ ತಲುಪಿದ ವೈದ್ಯ!
ಆಸ್ಪತ್ರೆಯ ಆವರಣದಲ್ಲಿ ಪ್ರವಾಹದ ನೀರು ತುಂಬಿದ್ದರಿಂದ ವೈದ್ಯರು ಸ್ಟ್ರೆಚರ್ ಸಹಯದಿಂದ ಕೋವಿಡ್ ಸೆಂಟರ್ ತಲುಪಿದ್ದಾರೆ.
ಸ್ಟ್ರೆಚರ್ ಮೇಲೆ ಕುಳಿತು ಕೋವಿಡ್ ಸೆಂಟರ್ ತಲುಪಿದ ವೈದ್ಯ
ಬಿಎಂಸಿಯ ನಾಯರ್ ಆಸ್ಪತ್ರೆ ಆವರಣಕ್ಕೂ ನೀರು ನುಗ್ಗಿದ ಕಾರಣ ವೈದ್ಯರು ಕೋವಿಡ್ ವಾರ್ಡ್ಗೆ ತೆರಳಲು ಹರಸಾಹಸ ಪಡಬೇಕಾಯ್ತು. ಪಿಪಿಇ ಕಿಟ್ ಧರಿಸಿದ ವೈದ್ಯರೊಬ್ಬರು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡದಲ್ಲಿರುವ ಕೋವಿಡ್ ವಾರ್ಡ್ಗೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ಪಿಪಿಇ ಕಿಟ್ ಧರಿಸಿದ್ದರಿಂದ ವೈದ್ಯರು ಪ್ರವಾಹದಿಂದ ತುಂಬಿದ ನೀರಿನಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಟ್ರೆಚರ್ ಮೇಲೆ ವೈದ್ಯರನ್ನು ಕೂರಿಸಿಕೊಂಡ ಕೆಲ ಜನರು ಪ್ರವಾಹದ ನೀರಿನಲ್ಲಿ ತಳ್ಳಿಕೊಂಡು ಹೋಗಿ ವೈದ್ಯರನ್ನು ಕೋವಿಡ್ ಸೆಂಟರ್ ತಲುಪಿಸಿದ್ದಾರೆ.