ಕರ್ನಾಟಕ

karnataka

ETV Bharat / bharat

ಮಿಸ್​ ವರ್ಲ್ಡ್​ ಅಮೆರಿಕ ಕಿರೀಟ ತಯಾರಿಸಿದ ಸೂರತ್‌ ಕಂಪನಿ - ಸೂರತ್​ ಸುದ್ದಿ 2020

ಸೂರತ್‌ನ ಡೈಮಂಡ್ ಜ್ಯುವೆಲ್ಲರ್ಸ್ ಕಂಪನಿಗೆ ಮಿಸ್​ ವರ್ಲ್ಡ್​ ಅಮೆರಿಕ ಕಿರೀಟ ತಯಾರಿಸುವ ಅವಕಾಶ ಒದಗಿದೆ.

ಮಿಸ್​ ವರ್ಲ್ಡ್​ ಅಮೆರಿಕ ಕಿರೀಟ
ಮಿಸ್​ ವರ್ಲ್ಡ್​ ಅಮೆರಿಕ ಕಿರೀಟ

By

Published : Oct 22, 2020, 4:46 PM IST

ಗುಜರಾತ್:ಮಿಸ್​ ವರ್ಲ್ಡ್​ ಅಮೆರಿಕದಲ್ಲಿ ವಿಜೇತರಾದವರಿಗೆ ಕಿರೀಟ ತೊಡಿಸುತ್ತಾರೆ. ಆ ಕಿರೀಟವನ್ನು ಚೀನಾ ಮತ್ತು ಹಾಂಕಾಂಗ್​​​ನಲ್ಲಿ ತಯಾರಿಸಲಾಗುತ್ತಿತ್ತು. ಆದರೆ, ಈ ಬಾರಿ ಸೂರತ್‌ನ ಡೈಮಂಡ್ ಜ್ಯುವೆಲ್ಲರ್ಸ್ ಕಂಪನಿಗೆ ಕಿರೀಟ ತಯಾರಿ ಮಾಡುವ ಅವಕಾಶ ದೊರೆತಿದೆ.

ಬಿಳಿ ಮತ್ತು ನೀಲಿ ಕಲ್ಲುಗಳಿಂದ ತಯಾರಿ ಮಾಡಲಾಗುತ್ತಿದೆ. ಇನ್ನು 650 ಕ್ಯಾರೆಟ್ ವಜ್ರಗಳು, 650 ಗ್ರಾಂ ಚಿನ್ನ ಮತ್ತು 150 ತುಂಡು ಪಚ್ಚೆ ಕಲ್ಲುಗಳನ್ನು ಬಳಕೆ ಮಾಡಲಾಗುತ್ತಿದೆ.

ಈ ಬಾರಿ ಈ ಅವಕಾಶ ಭಾರತಕ್ಕೆ ಬರಲು ಕಾರಣ ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆ. ಮಿಸ್ ವರ್ಲ್ಡ್ ಅಮೆರಿಕ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್​​ನಲ್ಲಿ ನಡೆಯಲಿದೆ. ಈ ವಿಶೇಷ ವಿನ್ಯಾಸಕ್ಕಾಗಿ 10 ಉದ್ಯೋಗಿಗಳು 25 ದಿನಗಳವರೆಗೆ ನಿತ್ಯ 8 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಇನ್ನು ಈ ಕಿರೀಟವನ್ನು ಸೂರತ್‌ನ ಜೇಮ್ಸ್ ಮತ್ತು ಜ್ಯುವೆಲ್ಲರಿ ಕಂಪನಿ ಗುರುಕ್ರಿಪಾ ರಫ್ತು ಮಾಡಿದೆ.

ABOUT THE AUTHOR

...view details