ನವದೆಹಲಿ: ಕ್ವಾರಂಟೈನ್ನಲ್ಲಿದ್ದವರು ವೈದ್ಯಕೀಯ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಆರೋಪದಲ್ಲಿ ದೆಹಲಿಯ ನರೇಲಾ ಐಸೋಲೇಷನ್ ಕ್ಯಾಂಪ್ ಬಳಿ ಸೈನ್ಯವನ್ನು ನಿಯೋಜನೆ ಮಾಡಲಾಗಿದೆ.
ಸೋಂಕಿತರಿಂದ ಚಿಕಿತ್ಸೆಗೆ ಅಸಹಕಾರ: ದೆಹಲಿಯ ಐಸೋಲೇಷನ್ ಕ್ಯಾಂಪ್ನಲ್ಲಿ ಸೇನೆ ನಿಯೋಜನೆ - ನವದೆಹಲಿ
ದೆಹಲಿಯ ನರೆಲಾ ಪ್ರದೇಶದಲ್ಲಿ ಕ್ವಾರಂಟೈನ್ನಲ್ಲಿದ್ದವರು ವೈದ್ಯಕೀಯ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಕಾರಣದಿಂದ ಸೈನ್ಯ ನಿಯೋಜನೆ ಮಾಡಿ ಮುಂಜಾಗ್ರತೆ ವಹಿಸಲಾಗಿದೆ.
ನಿನ್ನೆಯಷ್ಟೇ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗಳು ವೈದ್ಯರಿಗೆ ಸಹಕಾರ ನೀಡದೇ ಪುಂಡಾಟ ತೋರಿದ್ದರು. ಜೊತೆಗೆ ಚಿಕಿತ್ಸೆಗೆ ಸಹಕಾರ ನೀಡಲು ನಿರಾಕರಿಸಿದ್ದರು. ಇದನ್ನು ಕಂಡ ಆರೋಗ್ಯ ಇಲಾಖೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿಕೊಂಡಿದ್ದು ಐಸೋಲೇಷನ್ ಕ್ಯಾಂಪ್ ಬಳಿ ಸೈನ್ಯವನ್ನು ನಿಯೋಜಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಡ್ರೋನ್ ನಿಗಾ ಕೂಡಾ ಇಡಲಾಗಿದೆ.
ಕೆಲ ದಿನಗಳ ಹಿಂದೆ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಲ್ಲಿ ಬಹುಪಾಲು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ದೇಶದ ಹಲವೆಡೆ ಚದುರಿದ್ದ ಅವರನ್ನು ಪತ್ತೆಹಚ್ಚಿ ಅವರನ್ನು ಕ್ವಾರಂಟೈನ್ನಲ್ಲಿ ಇಡುವ ಕಾರ್ಯ ಮುಂದುವರೆದಿತ್ತು. ದೆಹಲಿಯ ನರೆಲಾ ಪ್ರದೇಶದಲ್ಲೂ ಕೂಡಾ ಕೆಲವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು.