ದಿಯೋಬಂದ್: ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದು ಜೋಡಿಹಕ್ಕಿಯ ವಿವಾಹಕ್ಕೆ ಆತಿಥ್ಯ ವಹಿಸಿತ್ತು. ಮದುವೆ ಕಾರ್ಯಕ್ರಮಕ್ಕಾಗಿಯೇ ಪೊಲೀಸ್ ಠಾಣೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಪೊಲೀಸರ ಸಹಾಯ ಕೋರಿ ಬಂದ ಪ್ರೇಮಿಗಳಿಗೆ ಇಲ್ಲಿನ ಸಹರಾನ್‌ಪುರದ ದಿಯೋಬಂದ್ ಪೊಲೀಸ್ ಠಾಣೆಯಲ್ಲೇ ಮದುವೆ ಮಾಡಿಸಲಾಗಿದೆ.

ಖುಷ್ನಸೀಬ್ ಮತ್ತು ಅಬ್ದುಲ್ ಮಲಿಕ್ ಜೋಡಿ ಕೆಲವು ವರುಷಗಳಿಂದ ಪ್ರೀತಿಸುತ್ತಿದ್ದು, ಇವರಿಬ್ಬರ ಮದುವೆಗೆ ಕುಟುಂಬದ ತೀವ್ರ ವಿರೋಧವಿತ್ತು. ಹೀಗಾಗಿ ಪ್ರೇಮಿಗಳು ಸಹಾಯ ಕೋರಿ ಸಹರಾನ್‌ಪುರದ ಎಸ್ಎಸ್ಪಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಪೊಲೀಸರು ಮಧ್ಯವರ್ತಿಯಾಗಿ ಎರಡೂ ಕುಟುಂಬಗಳ ಜೊತೆ ಮಾತುಕತೆ ನಡೆಸಿದರೂ ಏನೂ ಪ್ರಯೋಜನವಾಗಿರಲಿಲ್ಲ. ಕೊನೆಯದಾಗಿ ಪೊಲೀಸರು, ಪೊಲೀಸ್ ಠಾಣೆಯೊಳಗೆ ಇವರಿಬ್ಬರ ಮದುವೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಶೇಷ ಸಂಭ್ರಮಕ್ಕೆ ಅನೇಕರು ಸಾಕ್ಷಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಪಠಾಣ್‌ಪುರ ಮೊಹಲ್ಲಾ ನಿವಾಸಿ ಅಬ್ದುಲ್ ಮಲಿಕ್, ಮಿರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧೆವಾಡ್ ಗ್ರಾಮದ ಖುಷ್ನಸೀಬ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಮದುವೆಯಾಗಲೂ ನಿರ್ಧರಿಸಿದ್ದರು. ಆದರೆ ಮದುವೆಗೆ ಅವರ ಕುಟುಂಬದ ವಿರೋಧವಿದ್ದ ಕಾರಣ ಹಾಗೂ ಪ್ರೇಮಿಗಳು ವಯಸ್ಕರಾಗಿರುವ ಕಾರಣ ನಾವು ಸಹಾಯ ಮಾಡಲು ಮುಂದಾದೆವು ಎಂದು ತಿಳಿಸಿದ್ದಾರೆ.
ಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಿದ್ದಕ್ಕಾಗಿ ನಾವು ಯಾವಾಗಲೂ ಪೊಲೀಸರಿಗೆ ಕೃತಜ್ಞರಾಗಿರುತ್ತೇವೆ. ಇದೊಂದು ವಿಭಿನ್ನ ರೀತಿಯ ಮದುವೆಯಾಗಿದ್ದು, ಬದುಕಿನ ಕೊನೆವರೆಗೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಎಂದು ಖುಷ್ನಸೀಬ್ ಮತ್ತು ಅಬ್ದುಲ್ ಮಲಿಕ್ ಜೋಡಿ ತಿಳಿಸಿದೆ.