ಬೀಜಿಂಗ್: ಜಾಗತಿಕವಾಗಿ ಆತಂಕವನ್ನ ಸೃಷ್ಟಿಸಿರುವ ಕೊರೊನಾ ವೈರಸ್ ತನ್ನ ಹಾವಳಿ ಮುಂದುವರೆಸಿದೆ. ಇದುವರೆಗೂ ಮಹಾಮಾರಿಗೆ ಮೃತಪಟ್ಟವರ ಸಂಖ್ಯೆ ನಾಲ್ಕು ಸಾವಿರಕ್ಕೆ ಏರಿಕೆ ಆಗಿದೆ.
ಕೊರೊನಾ ವೈರಸ್: ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ... ನಿಲ್ಲದ ಭೀತಿ - ಕೊರೊನಾ ವೈರಸ್ನಿಂದ ಜನರ ಸಾವು
ಕೊರೊನಾ ವೈರಸ್ಗೆ ಮೃತಪಟ್ಟವರ ಸಂಖ್ಯೆ ನಾಲ್ಕು ಸಾವಿರಕ್ಕೆ ಏರಿಕೆ ಆಗಿದೆ.
ಕೊರೊನಾ ವೈರಸ್
ಮಹಾಮಾರಿಗೆ ಕಾರಣವಾದ ಹಾಗೂ ಮೊದಲು ಕಂಡು ಬಂದ ಚೀನಾದಲ್ಲಿ ಮತ್ತೆ 17 ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 4,011ಕ್ಕೆ ಏರಿಕೆ ಆಗಿದೆ. ಒಟ್ಟಾರೆ 100 ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. 1,10,000 ಜನರಿಗೆ ವೈರಸ್ ಇರುವುದು ದೃಢಪಟ್ಟಿದೆ.
ಬೆಂಗಳೂರಿನಲ್ಲೂ ಒಬ್ಬನಲ್ಲಿ ಕೊರೊನಾ ವೈರಸ್ ತಗುಲಿರುವುದು ಸಾಬೀತಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಲಾಗಿದೆ. ಈ ಟೆಕ್ಕಿ ಸುಮಾರು 2000 ಮಂದಿ ಜತೆ ಸಂಪರ್ಕ ಸಾಧಿಸಿದ್ದ ಎನ್ನಲಾಗಿದ್ದು, ಅವೆರಲ್ಲರ ಮೇಲೂ ಈಗ ನಿಗಾ ಇಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.