ಹರಿಯಾಣ: ಸೋನಿಪತ್ ನಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 48 ಕ್ಕೆ ಏರಿದೆ. ಘಟನೆಗೆ ಕಾರಣವಾದ ಥಾನಾ ಕಲನ್ ಗ್ರಾಮದ ಮೋಹಿತ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸರು ಗುರುವಾರ ಖಾರ್ಖೋಡಾದಲ್ಲಿ ಅಕ್ರಮ ಮದ್ಯ ಘಟಕವನ್ನು ಪತ್ತೆ ಹಚ್ಚಿ, ಓರ್ವನನ್ನು ಬಂಧಿಸಿ 395 ಮದ್ಯದ ಬಾಟಲಿಗಳು, ಒಂದು ಮಷಿನ್, ನಕಲಿ ಲೇಬಲ್ಗಳನ್ನು ವಶಪಡಿಸಿಕೊಂಡಿದ್ದರು.