ನವದೆಹಲಿ:ಹಣಕಾಸು ವ್ಯವಹಾರ ಸಂಬಂಧ ಸೂಕ್ತ ಅನುಮತಿ ಪಡೆಯದೇ ಆನ್‌ಲೈನ್ ಪೇಮೆಂಟ್ ಆ್ಯಪ್ 'ಗೂಗಲ್ ಪೇ' ದೇಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ದೆಹಲಿ ಹೈಕೋರ್ಟ್ ಆರ್‌ಬಿಐ ಅನ್ನು ಪ್ರಶ್ನಿಸಿದೆ.
ಅನುಮತಿ ಇಲ್ಲದೇ 'ಗೂಗಲ್ ಪೆೇ' ಹೇಗೆ ಕಾರ್ಯನಿರ್ವಹಿಸುತ್ತಿದೆ? ಆರ್‌ಬಿಐಗೆ ದೆಹಲಿ ಹೈಕೋರ್ಟ್ ಪ್ರಶ್ನೆ - ಸುಪ್ರೀಂ ಪ್ರಶ್ನೆ
ಜನಪ್ರಿಯ ಆನ್‌ಲೈನ್ ಪೇಮೆಂಟ್ ಆ್ಯಪ್ ಗೂಗಲ್ ಪೇ ವಿರುದ್ಧ ಕೇಳಿಬಂದ ದೂರಿನ ಸಂಬಂಧ ದೆಹಲಿ ಹೈಕೋರ್ಟ್ ಆರ್‌ಬಿಐ ಹಾಗೂ ಗೂಗಲ್ ಇಂಡಿಯಾಗೆ ನೊಟೀಸ್ ಜಾರಿ ಮಾಡಿದೆ.
ಈ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ನ್ಯಾ.ಎ.ಜೆ ಭಾಂಬನಿ ನೇತೃತ್ವದ ಪೀಠ ಕೇಂದ್ರ ಬ್ಯಾಂಕ್‌ಗೆ ಈ ಪ್ರಶ್ನೆ ಕೇಳಿದೆ. ಅಭಿಜಿತ್ ಮಿಶ್ರಾ ಎಂಬವವರು ಸಲ್ಲಿಸಿದ ಅರ್ಜಿಯಲ್ಲಿ, ಈ ರೀತಿ ಹಣಕಾಸು ವ್ಯವಹಾರ ನಡೆಸುವುದಕ್ಕೆ ಆರ್‌ಬಿಐನಿಂದ 'ಗೂಗಲ್ ಪೇ' ಯಾವುದೇ ರೀತಿಯ ಅಧಿಕಾರ, ಅನುಮತಿ ಪಡೆದಿಲ್ಲ. ಈ ಬಗ್ಗೆ ದಾಖಲೆ ಒದಗಿಸಿದ ಅರ್ಜಿದಾರರು, ಮಾರ್ಚ್ 20, 2019 ರಂದು ಕೇಂದ್ರ ಬ್ಯಾಂಕ್ ಅಧಿಕೃತವಾಗಿ ಬಿಡುಗಡೆ ಮಾಡಿದ 'ಹಣಕಾಸು ವ್ಯವಹಾರಗಳ ನಿರ್ವಾಹಕರ ಪಟ್ಟಿ' ಒದಗಿಸಿದ್ದಾರೆ. ಈ ಪಟ್ಟಿಯಲ್ಲಿ ಗೂಗಲ್ ಪೇ ಹೆಸರಿಲ್ಲ. ಹಾಗಿದ್ದರೂ ಈ ಸಂಸ್ಥೆ ದೇಶದಲ್ಲಿ ಕೋಟ್ಯಂತರ ರೂಪಾಯಿ ಹಣಕಾಸು ವ್ಯವಹಾರದಲ್ಲಿ ತೊಡಗಿರುವುದಾಗಿ ಅವರು ಅರ್ಜಿಯಲ್ಲಿ ದೂರಿದ್ದಾರೆ.
ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳ ಪೀಠ, ಸೂಕ್ತ ಕಾರಣ ಕೇಳಿ ಆರ್‌ಬಿಐ ಹಾಗೂ ಗೂಗಲ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ.