ಕರ್ನಾಟಕ

karnataka

ETV Bharat / bharat

ಕಾರ್ಗಿಲ್​ ಯುದ್ಧದ ಮೇಲೆ ಹವಾಮಾನ ಬೀರಿದ ಪರಿಣಾಮ ಹೇಗಿತ್ತು ಗೊತ್ತೇ? - Kargil Vijay Divas

ಕಾರ್ಗಿಲ್‌ನಲ್ಲಿನ ತಾಪಮಾನವು ಚಳಿಗಾಲದಲ್ಲಿ -30 ಸೆಂಟಿಗ್ರೇಡ್​ ತಲುಪುತ್ತದೆ ಮತ್ತು ಬೇಸಿಗೆಯ ತಿಂಗಳಲ್ಲಿ ಘನೀಕರಿಸುವ ಮಟ್ಟಕ್ಕಿಂತ ಹೆಚ್ಚಾಗುತ್ತದೆ. ಎತ್ತರದ ವಾತಾವರಣವು ಸೈನಿಕರು ಮತ್ತು ಯುದ್ಧದ ಸಾಧನಗಳ ಮೇಲೇ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕಡಿಮೆ ಆಮ್ಲಜನಕ ಪ್ರಮಾಣದಿಂದ ವ್ಯಾಪಕವಾದ ದೈಹಿಕ ಪರಿಣಾಮಗಳು ಮತ್ತು ಕಾಯಿಲೆಗಳಿಗೆ ಕಾರಣವಾಗುತ್ತದೆ.

The Challenges Of Weather And Terrain Kargil War ಕಾರ್ಗಿಲ್​ ಯುದ್ಧದ ಮೇಲೆ ಹವಾಮಾನದ ಪರಿಣಾಮ
ಕಾರ್ಗಿಲ್​ ಯುದ್ಧ

By

Published : Jul 25, 2020, 5:01 PM IST

ಹೈದರಾಬಾದ್ :ಎತ್ತರದ ಪರ್ವತ ಶಿಖರಗಳು 18 ರಿಂದ 21 ಸಾವಿರ ಅಡಿಗಳಷ್ಟು ಎತ್ತರದಲ್ಲಿರುತ್ತವೆ. ಕಣಿವೆಗಳು 10 ರಿಂದ 11 ಸಾವಿರ ಅಡಿ ಎತ್ತರದಲ್ಲಿರುತ್ತವೆ. ಜಲ್ಲಿ ಮತ್ತು ಕಲ್ಲುಗಳಿಂದ ಪ್ರತಿ ಹಂತದಲ್ಲೂ ಮಣ್ಣು ಉರುಳುತ್ತದೆ. ಬೇಸಿಗೆಯಲ್ಲಿ ಮರ - ಗಿಡಗಳ ಕೊರತೆಯಿಂದಾಗಿ ತೀವ್ರವಾದ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ ಮತ್ತು ಆಯಾಸವನ್ನು ಹೆಚ್ಚಿಸುತ್ತದೆ. ಇದು ಸೇನಾಪಡೆಯ ಯುದ್ಧ ದಕ್ಷತೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ.

ಹವಾಮಾನ ಅಂಶ ಮತ್ತು ಯುದ್ಧದ ಮೇಲೆ ಅದರ ಪ್ರಭಾವ

ತೆಳುವಾದ ಗಾಳಿ, ತಂಪಾದ ಹವಾಮಾನ ಮತ್ತು ಒರಟಾದ ಪರ್ವತಗಳು ಮನುಷ್ಯನ ಬದುಕುವ ಸಾಮರ್ಥ್ಯಕ್ಕೆ ಗಮನಾರ್ಹ ಸವಾಲನ್ನು ಒಡ್ಡುತ್ತವೆ. ಹೆಚ್ಚಿನ ಎತ್ತರವು ಪ್ರದೇಶದಾದ್ಯಂತ ಕಡಿಮೆ ತಾಪಮಾನವನ್ನು ಉತ್ಪಾದಿಸುತ್ತದೆ. ಸಾಮಾನ್ಯ ನಿಯಮದಂತೆ, ಎತ್ತರದಲ್ಲಿ ಪ್ರತಿ 100 ಮೀಟರ್ ಹೆಚ್ಚಳಕ್ಕೆ ತಾಪಮಾನವು ಒಂದು ಡಿಗ್ರಿ ಸೆಂಟಿಗ್ರೇಡ್ ಕಡಿಮೆಯಾಗುತ್ತದೆ.

ಕಾರ್ಗಿಲ್‌ನಲ್ಲಿನ ತಾಪಮಾನವು ಚಳಿಗಾಲದಲ್ಲಿ -30 ಸೆಂಟಿಗ್ರೇಡ್​ ತಲುಪುತ್ತದೆ ಮತ್ತು ಬೇಸಿಗೆಯ ತಿಂಗಳಲ್ಲಿ ಘನೀಕರಿಸುವ ಮಟ್ಟಕ್ಕಿಂತ ಹೆಚ್ಚಾಗುತ್ತದೆ. ಎತ್ತರದ ವಾತಾವರಣವು ಸೈನಿಕರು ಮತ್ತು ಯುದ್ಧದ ಸಾಧನಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕಡಿಮೆ ಆಮ್ಲಜನಕ ಪ್ರಮಾಣದಿಂದ ವ್ಯಾಪಕವಾದ ದೈಹಿಕ ಪರಿಣಾಮಗಳು ಮತ್ತು ಕಾಯಿಲೆಗಳಿಗೆ ಕಾರಣವಾಗುತ್ತದೆ.

ವಾತಾವರಣವು ಸಾವುನೋವುಗಳನ್ನು ಉಂಟುಮಾಡುತ್ತದೆ. ಮಿಲಿಟರಿ ಕಾರ್ಯಾಚರಣೆಯನ್ನು ನಿರ್ವಹಿಸುವ ಮತ್ತು ಉಳಿಸಿಕೊಳ್ಳುವ ಸೈನಿಕರ ಸಾಮರ್ಥ್ಯವನ್ನು ಕುಸಿಯುವಂತೆ ಮಾಡುತ್ತದೆ. ಕಡಿಮೆ ಗಾಳಿಯ ಒತ್ತಡವು ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಸಹ ಬದಲಾಯಿಸುತ್ತದೆ.

ಎತ್ತರದ ಪ್ರದೇಶದಲ್ಲಿ ಎದುರಾಗುವ ಅನಾರೋಗ್ಯ :

ಹೈಪೋಕ್ಸಿಯಾದಿಂದಾಗಿ ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ, 5,000 ಅಡಿ (1,524 ಮೀ) ಗಿಂತ ಹೆಚ್ಚಿನ ಎತ್ತರದಲ್ಲಿ ಇದು ಸಂಭವಿಸುತ್ತದೆ. ಹೈಪೋಕ್ಸಿಯಾ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು, ಅವುಗಳಲ್ಲಿ ಕೆಲವು ಮಾರಕವೆಂದು ಸಾಬೀತುಪಡಿಸಲಾಗಿದೆ.

ಪಲ್ಮನರಿ ಎಡಿಮಾ (HAPE) ಮತ್ತು ಸೆರೆಬ್ರಲ್ ಎಡಿಮಾ (HACE) ಹೆಚ್ಚು ತೀವ್ರವಾದ ರೋಗಲಕ್ಷಣಗಳಾಗಿವೆ. ಸೈನಿಕರು ಸಮುದ್ರ ಮಟ್ಟಕ್ಕಿಂತ 8,000 ಅಡಿ (2,438 ಮೀ) ಮೀರಿ ವೇಗವಾಗಿ ಏರಿದಾಗ ಈ ರೋಗ ಮನುಷ್ಯನ ಮೇಲೆ ಆಕ್ರಮಣ ಮಾಡುತ್ತದೆ.

ಪಲ್ಮನರಿ ಎಡಿಮಾ (HAPE) - ಶ್ವಾಸಕೋಶದಲ್ಲಿ ದ್ರವದ ಶೇಖರಣೆಗೊಂಡು ಸಾವಿಗೆ ಸಾಮಾನ್ಯ ಕಾರಣವಾಗುವ ಅತ್ಯಂತ ಸಾಮಾನ್ಯ ಕಾಯಿಲೆಯಾಗಿದೆ.

ಸಮುದ್ರ ಮಟ್ಟಕ್ಕಿಂತ 8,000 ಅಡಿ (2,446 ಮೀ) ಮೀರಿದ ಎತ್ತರಕ್ಕೆ ವೇಗವಾಗಿ ಏರುವುದು ಸಾಮಾನ್ಯವಾಗಿ ಎಎಂಎಸ್ ಕಾಳಯಿಲೆಗೆ ಕಾರಣವಾಗುತ್ತದೆ. ತಲೆನೋವು ಮತ್ತು ವಾಕರಿಕೆ ಸಾಮಾನ್ಯ ಲಕ್ಷಣಗಳಾಗಿವೆ. ಎಎಂಎಸ್ ಪೀಡಿತರಲ್ಲಿ ಸ್ನಾಯುಗಳ ದೌರ್ಬಲ್ಯ, ಆಯಾಸ ಕಂಡುಬರುತ್ತದೆ ಮತ್ತು ಹಸಿವು ಕಡಿಮೆಯಾಗುತ್ತದೆ.

ಕಾರ್ಗಿಲ್​ ಸೇರಿದಂತೆ ಸಿಯಾಚಿನ್​ ಭಾಗದಲ್ಲಿ ಯುದ್ಧ ಮಾಡುವುದು ಎಂದರೆ ಆಧುನಿಕ ಯುದ್ಧ ಸಾಮಗ್ರಿಗಳಿಂದ ಅಲ್ಲ ಬದಲಾಗಿ ಅಲ್ಲಿನ ಹವಾಮಾನದೊಂದಿಗೆ. ಹಾಗಾಗಿ ಇದು ಮಾನವ ಮಾನವರ ನಡುವಿನ ಯುದ್ಧವಷ್ಟೇ ಅಲ್ಲ, ಸೈನಿಕರು ಇಲ್ಲಿ ಹವಾಮಾನದೊಂದಿಗೆ ಗುದ್ದಾಡಿ ಗೆಲ್ಲಬೇಕಿದೆ. ಸೈನಿಕ ಹವಾಮಾನದ ವಿರುದ್ಧ ಗೆದ್ದರಷ್ಟೇ ಯುದ್ದದರಲ್ಲಿ ನೆರೆ ರಾಷ್ಟ್ರದ ಸೈನಿಕರನ್ನು ಗೆಲ್ಲಲು ಸಾಧ್ಯ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಕಾರ್ಗಿಲ್​ ವಿಜಯ ಸಾಧಿಸಿತ್ತು ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು.

ABOUT THE AUTHOR

...view details