ಕರ್ನಾಟಕ

karnataka

ETV Bharat / bharat

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಸಿಎಂ ಗೆಹ್ಲೋಟ್​ರಿಂದ ದೂರ ಉಳಿದ ಬಿಟಿಪಿ! - ಭಾರತೀಯ ಬುಡಕಟ್ಟು ಪಕ್ಷ ಬಿಟಿಪಿ

ಬಿಟಿಪಿ ಶಾಸಕರು ತಾವು ನಿರ್ದಿಷ್ಟ ಪಕ್ಷದೊಂದಿಗೆ ಇದ್ದೇವೆಯೇ ಹೊರತು ಯಾವುದೇ ವ್ಯಕ್ತಿಯೊಂದಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ದಂಗೆಯ ಬಳಿಕ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ತೊಂದರೆಗಳು ಹೆಚ್ಚುತ್ತಿವೆ.

ashok gehlot
ashok gehlot

By

Published : Jul 13, 2020, 10:26 AM IST

ಜೈಪುರ(ರಾಜಸ್ಥಾನ):ರಾಜಸ್ಥಾನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ಅಂತರ ಕಾಯ್ದುಕೊಂಡಿದೆ.

ಬಿಟಿಪಿ ಶಾಸಕರು ತಾವು ನಿರ್ದಿಷ್ಟ ಪಕ್ಷದೊಂದಿಗೆ ಇದ್ದೇವೆಯೇ ಹೊರತು ಯಾವುದೇ ವ್ಯಕ್ತಿಯೊಂದಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಾಸಕರಾದ ರಾಜ್‌ಕುಮಾರ್ ರಾಟ್ ಮತ್ತು ರಾಂಪ್ರಸಾದ್ ಬಿಟಿಪಿ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ದಂಗೆಯ ಬಳಿಕ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ತೊಂದರೆಗಳು ಹೆಚ್ಚುತ್ತಿವೆ. ಒಂದೆಡೆ ಪಕ್ಷದ ಶಾಸಕರನ್ನು ಒಗ್ಗೂಡಿಸುವುದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ದೊಡ್ಡ ಸವಾಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಶಾಸಕರು ಸಹ ಇದೀಗ ಹಿಂದೆ ಸರಿಯುತ್ತಿದ್ದಾರೆ.

ಬಿಟಿಪಿ ತನ್ನ ಬೆಂಬಲವನ್ನು ಕಾಂಗ್ರೆಸ್​ಗೆ ನೀಡಿದೆ. ರಾಜ್ಯಸಭಾ ಚುನಾವಣೆಯಲ್ಲೂ ಬಿಟಿಪಿ ಕಾಂಗ್ರೆಸ್​ಗೆ ಬೆಂಬಲ ನೀಡಿತ್ತು. ಆದ್ದರಿಂದ ಬಿಟಿಪಿ ಕಾಂಗ್ರೆಸ್ ಪಕ್ಷಕ್ಕರ ಬೆಂಬಲ ನಿಡುತ್ತಿದೆ. ಯಾವುದೇ ವ್ಯಕ್ತಿಗೆ ಅಲ್ಲ ಎಂದು ಬಿಟಿಪಿ ಶಾಸಕರು ಸ್ಪಷ್ಟಪಡಿಸಿದ್ದಾರೆ.

ಸಚಿನ್​ ಪೈಲಟ್​ ಬಂಡೆದ್ದು, ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ. ಅವರ ಬೆಂಬಲಕ್ಕೆ 30 ಶಾಸಕರು ಇದ್ದಾರೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್​ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಮಾಡ್ತಿದ್ದಾರೆ.

ABOUT THE AUTHOR

...view details