ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಸಾಮ್ರಾಜ್ಯ ಸ್ಥಾಪನೆಯಾಯ್ತು, ಈಗ ಇಡೀ ದೇಶಕ್ಕೆ ವಿಸ್ತರಣೆಯಾಗಲಿದೆಯಂತೆ ಎಎಪಿ!

ಆಮ್ ಆದ್ಮಿ ಪಕ್ಷಕ್ಕೆ ಸೇರಲು ಬಯಸುವವರು 9871010101 ನಂಬರ್​ಗೆ ಮಿಸ್ಡ್ ಕಾಲ್​ ನೀಡಬೇಕು ಎನ್ನುವ ಪೋಸ್ಟರ್‌ ಅನ್ನು 20 ರಾಜ್ಯಗಳಲ್ಲಿ ಹಾಕಲಾಗುವುದು ಎಂದು ಪಕ್ಷದ ಹಿರಿಯ ಮುಖಂಡ ಗೋಪಾಲ್ ರೈ ತಿಳಿಸಿದರು.

aam-aadmi-party
aam-aadmi-party

By

Published : Feb 22, 2020, 10:16 PM IST

ನವದೆಹಲಿ:ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಜಯ ಸಾಧಿಸಿ, ಸತತ 3ನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಅಧಿಕಾರವಹಿಸಿಕೊಂಡಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಿಕ್ಕ ಮತದಾರರ ಬೆಂಬಲದಿಂದ ಪಕ್ಷ ಮತ್ತಷ್ಟು ಬಲಗೊಂಡಿದೆ. ಇದೇ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ದೇಶಾದ್ಯಂತ ಹರಡಲು ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಾಳೆ ಅಂದರೆ ಫೆ.23 ಭಾನುವಾರದಂದು ತನ್ನ ಪಕ್ಷವನ್ನು ದೇಶದ 20 ರಾಜ್ಯಗಳಲ್ಲಿ ರಾಷ್ಟ್ರ ನಿರ್ಮಾಣ ಅಭಿಯಾನ ಎಂಬ ಹೆಸರಿನಲ್ಲಿ ಪಕ್ಷ ವಿಸ್ತರಣೆ ಮತ್ತು ಬಲವರ್ಧನೆಯನ್ನು ಕೈಗೊಳ್ಳಲಿದೆ.

ದೆಹಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ರಾಷ್ಟ್ರ ನಿರ್ಮಾಣ ಅಭಿಯಾನದ ಅಡಿ ಪಕ್ಷ ಸೇರಲು ಇಚ್ಚಿಸುವ ಜನರಿಗೆ ಮಿಸ್ಡ್ ಕಾಲ್ ನೀಡುವ ಫೋನ್ ನಂಬರ್​ ನೀಡಿದ್ದರು. ಈ ಅಭಿಯಾನದಡಿ ದೆಹಲಿಯಲ್ಲಿ 1,72,269 ಮತ್ತು ಯುಪಿಯಲ್ಲಿ 1,81,212 ಸೇರಿದಂತೆ ಒಟ್ಟು 16 ಲಕ್ಷ ಜನರು ಫೋನ್ ನಂಬರ್​ಗೆ ಮಿಸ್ ಕಾಲ್​ ನೀಡುವ ಮೂಲಕ ಪಕ್ಷಕ್ಕೆ ಸೇರಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಗೋಪಾಲ್ ರೈ ಹೇಳಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷವು ದೇಶಾದ್ಯಂತ ತನ್ನ ರಾಜಕಾರಣವನ್ನು ವಿಸ್ತರಿಸಲಿದೆ. ಅದಕ್ಕಾಗಿ ಈ ಅಭಿಯಾನವನ್ನು ಪ್ರಾರಂಭಿಸುತ್ತಿದ್ದು, ಪಕ್ಷಕ್ಕೆ ಸೇರಲು ಬಯಸುವವರು 9871010101 ನಂಬರ್​ಗೆ ಮಿಸ್ಡ್ ಕಾಲ್​​ ನೀಡಬೇಕು ಎನ್ನುವ ಪೋಸ್ಟರ್‌ನನ್ನು 20 ರಾಜ್ಯಗಳಲ್ಲಿ ಹಾಕಲಾಗುವುದು ಹಾಗೂ ಸ್ಥಳೀಯ ಜನರನ್ನು ಸುಲಭವಾಗಿ ತಲುಪಲು ಆಯಾ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯ ಪೋಸ್ಟರ್‌ಗಳನ್ನು ತಯಾರಿಸಲಾಗುತ್ತಿದೆ ಎಂದರು.

ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಆಯಾ ರಾಜ್ಯಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ದೆಹಲಿಯಲ್ಲಿರುವ ಧನಾತ್ಮಕ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಮಾದರಿಯನ್ನು ಅಲ್ಲಿನ ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ಮಾಡುತ್ತಾರೆ ಎಂದು ಗೋಪಾಲ್ ರೈ ತಿಳಿಸಿದರು.

ABOUT THE AUTHOR

...view details