ಕರ್ನಾಟಕ

karnataka

ETV Bharat / bharat

ಥ್ಯಾಂಕ್ಯೂ ಪೊಲೀಸ್​ ಅಂಕಲ್​... ಬರ್ತ್​ಡೇ ಕೇಕ್​ ಸರ್​ಪ್ರೈಸ್​ ನೀಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ ಬಾಲಕಿ - Cake

ಭಾನುವಾರ ಬೆಳಿಗ್ಗೆ, ಸಾಕ್ಷಿ ತಾಯಿ ಮಗಳ ಹುಟ್ಟುಹಬ್ಬದ ಸಂತೋಷಕ್ಕಾಗಿ ಸಂಬಂಧಿಕರೊಬ್ಬರಿಗೆ ಸಂದೇಶವನ್ನು ವಾಟ್ಸ್​ಆ್ಯಪ್ ಮೂಲಕ ಕಳುಹಿಸಿದ್ದರು. ಆದ್ರೆ ಒಂದು ಗಂಟೆಯೊಳಗೆ ವೈರಲ್ ಆದ ಸಂದೇಶ ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಕಾಮಾಖ್ಯ ನಾರಾಯಣ್ ಸಿಂಗ್ ಅವರ ಮೊಬೈಲ್‌ಗೆ ಬಂದಿತ್ತು. ತಕ್ಷಣ ಹುಡುಗಿಗೆ ಕೇಕ್ ವ್ಯವಸ್ಥೆ ಮಾಡುವಂತೆ ಸಿಂಗ್ ತಮ್ಮ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ಸಸಾರಾಮ್
police brings birthday cake

By

Published : May 5, 2020, 9:33 PM IST

ಸಸಾರಾಮ್ (ಬಿಹಾರ): ಮೇ 4 ರಂದು 12ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಬಾಲಕಿಯೊಬ್ಬಳಿಗೆ ಪೊಲೀಸರೇ ಕೇಕ್​ ತಂದುಕೊಟ್ಟು ಬರ್ತ್​ಡೇ ಆಚರಿಸಿದ್ದು ಬಾಲಕಿಗೆ ಭಾರಿ ಖುಷಿ ತಂದಿದೆ.

ಇಲ್ಲಿನ ಟಕಿಯಾ ಮೂಲದ ಸಾಕ್ಷಿ ತನ್ನ ತಾಯಿಯೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಾಳೆ. ರಾಷ್ಟ್ರವ್ಯಾಪಿ ಲಾಕ್​ಡೌನ್​ ಆಗಿರುವುದರಿಂದ ಆಕೆಯ ತಂದೆ ಬೇರೆ ಊರಿನಲ್ಲಿ ಸಿಲುಕಿರುವುದಾಗಿ ಸಾಕ್ಷಿ ತಾಯಿ ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆ, ಸಾಕ್ಷಿ ತಾಯಿ ಮಗಳ ಹುಟ್ಟುಹಬ್ಬದ ಸಂತೋಷಕ್ಕಾಗಿ ಸಂದೇಶವನ್ನು ಸಂಬಂಧಿಕರೊಬ್ಬರಿಗೆ ವಾಟ್ಸ್​ಆ್ಯಪ್ ಮೂಲಕ ಕಳುಹಿಸಿದ್ದರು. ಆದ್ರೆ ಒಂದು ಗಂಟೆಯೊಳಗೆ ವೈರಲ್ ಆದ ಸಂದೇಶ ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಕಾಮಾಖ್ಯ ನಾರಾಯಣ್ ಸಿಂಗ್ ಅವರ ಮೊಬೈಲ್‌ಗೆ ಬಂದಿತ್ತು. ತಕ್ಷಣ ಹುಡುಗಿಗೆ ಕೇಕ್ ವ್ಯವಸ್ಥೆ ಮಾಡುವಂತೆ ಸಿಂಗ್ ತಮ್ಮ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ಸರ್​ಪ್ರೈಸ್​ ಕೊಡುವ ಸಲುವಾಗಿ ಸಿಂಗ್ ತನ್ನ ತಂಡದೊಂದಿಗೆ ಸಾಕ್ಷಿ ಮನೆಗೆ ಭೇಟಿ ನೀಡಿದರು. ಮನೆ ಬಾಗಿಲಲ್ಲಿ ಪೊಲೀಸರನ್ನು ನೋಡಿ ಎಲ್ಲರೂ ಒಮ್ಮೆ ಬೆರಗಾದರು. ಸಾಕ್ಷಿ ತಾಯಿ ತನ್ನ ಮನೆಯಿಂದ ಹೊರಬಂದಾಗ, ಪೊಲೀಸ್ ತಂಡವು ಕೇಕ್ ಬಾಕ್ಸ್ ಹೊಂದಿದ್ದನ್ನು ನೋಡಿ ಆಶ್ಚರ್ಯಚಕಿತರಾದರು. ಬಳಿಕ ಎಸ್‌ಎಚ್‌ಒ ಕೇಕ್​ ನೀಡಿ ಬಾಲಕಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ABOUT THE AUTHOR

...view details