ಕರ್ನಾಟಕ

karnataka

By

Published : Sep 12, 2020, 2:07 PM IST

ETV Bharat / bharat

ಕೋವಿಡ್-19 ರೋಗಿಗೆ ದೇಶದಲ್ಲೇ ಮೊದಲ ಬಾರಿಗೆ ಡಬಲ್​​​ ಶ್ವಾಸಕೋಶ ಕಸಿ!

ಕೃಷ್ಣಾ ಇನ್​​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ನಲ್ಲಿ (ಕಿಮ್ಸ್) 32 ವರ್ಷದ ಕೋವಿಡ್-19 ರೋಗಿಗೆ ವೈದ್ಯರು ಭಾರತದ ಮೊದಲ ಡಬಲ್ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಚೇತರಿಸಿಕೊಂಡ ನಂತರ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

operation
operation

ಹೈದರಾಬಾದ್ (ತೆಲಂಗಾಣ): ಸಾರ್ಕೊಯಿಡೋಸಿಸ್​ನಿಂದ ಬಳಲುತ್ತಿದ್ದ 32 ವರ್ಷದ ಕೋವಿಡ್-19 ರೋಗಿಗೆ ದೇಶದಲ್ಲೇ ಮೊದಲ ಬಾರಿಗೆ ಡಬಲ್ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಇಲ್ಲಿನ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

"ಡಾ. ಸಂದೀಪ್ ಅಟ್ಟಾವರ್ ನೇತೃತ್ವದ ವೈದ್ಯರ ತಂಡವು ಚಂಡೀಗಢ ಮೂಲದ ವ್ಯಕ್ತಿಯ ಶಸ್ತ್ರಚಿಕಿತ್ಸೆ ನಡೆಸಿದೆ" ಎಂದು ಕೃಷ್ಣ ಇನ್​​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ಪ್ರಕಟಣೆ ತಿಳಿಸಿದೆ.

ಚೇತರಿಸಿಕೊಂಡ ನಂತರ, ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಆ ವ್ಯಕ್ತಿ ಸಾರ್ಕೊಯಿಡೋಸಿಸ್​​​ನಿಂದ ಬಳಲುತ್ತಿದ್ದ. ಇದು ಅವನ ಶ್ವಾಸಕೋಶದ ಮೇಲೆ ಪರಿಣಾಮ ಬೀರಿದೆ. ಆತನ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಡಬಲ್ ಶ್ವಾಸಕೋಶದ ಕಸಿ ಚಿಕಿತ್ಸೆ ಮಾಡಲು ನಾವು ನಿರ್ಧರಿಸಿದೆವು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಕೋಲ್ಕತ್ತಾದಿಂದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಶ್ವಾಸಕೋಶವನ್ನು ಪಡೆಯಲಾಯಿತು. ಶಸ್ತ್ರಚಿಕಿತ್ಸೆ ಸಂಕೀರ್ಣವಾಗಿತ್ತು ಮತ್ತು ಶ್ವಾಸಕೋಶದ ಸಮಯೋಚಿತ ಕಸಿಯಿಂದ ರೋಗಿಯನ್ನು ಉಳಿಸಲು ಸಹಾಯ ಮಾಡಿತು ಎಂದು ಡಾ. ಸಂದೀಪ್ ಅಟ್ಟಾವರ್ ತಿಳಿಸಿದ್ದಾರೆ.

ABOUT THE AUTHOR

...view details