ಕರ್ನಾಟಕ

karnataka

ETV Bharat / bharat

ಉಗ್ರರ IED ಅಸ್ತ್ರಕ್ಕಿಂತ ಮತದಾರರ ವೋಟರ್ ID ಹೆಚ್ಚು ಶಕ್ತಿಶಾಲಿ!- ಪ್ರಧಾನಿ ನರೇಂದ್ರ ಮೋದಿ ಬಣ್ಣನೆ - ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಶಕ್ತಿಶಾಲಿ ಅಸ್ತ್ರವಾಗಿರುವ ಮತದಾನವನ್ನ ಪ್ರತಿಯೊಬ್ಬರೂ ಚಲಾಯಿಸಬೇಕು. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬಲಪಡಿಸಬೇಕು ಅಂತಾ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ

By

Published : Apr 23, 2019, 10:40 AM IST

ಅಹಮದಾಬಾದ್‌, (ಗುಜರಾತ್) :ಉಗ್ರರು ತಾವು ನಡೆಸುವ ವಿಧ್ವಂಸ ಕೃತ್ಯಗಳಿಗೆ IED ಅಸ್ತ್ರ ಬಳಸ್ತಾರೆ. ಆದರೆ, ಆ ಅಸ್ತ್ರಕ್ಕಿಂತಲೂ ಮತದಾರರ ವೋಟರ್‌ ಐಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಂಬಾ ಶಕ್ತಿಶಾಲಿಯಾದ ಅಸ್ತ್ಪ ಅಂತಾ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಇವತ್ತು ಅಹಮದಾಬಾದ್‌ನ ಗಾಂಧಿನಗರ ಕ್ಷೇತ್ರದ ರಾಣಿಪ್‌ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಶಕ್ತಿಶಾಲಿ ಅಸ್ತ್ರವಾಗಿರುವ ಮತದಾನವನ್ನ ಪ್ರತಿಯೊಬ್ಬರೂ ಚಲಾಯಿಸಬೇಕು. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬಲಪಡಿಸಬೇಕು ಅಂತಾ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ

ಪ್ರಜಾಪ್ರಭುತ್ವದ ಹಬ್ಬ ಮತದಾನ, ಇವತ್ತು ತವರು ಕ್ಷೇತ್ರದಲ್ಲಿ ನಾನು ಹಕ್ಕು ಚಲಾಯಿಸಿರುವೆ. ಪ್ರತಿಯೊಬ್ಬರೂ ಅತ್ಯುತ್ಸಾಹದಿಂದ ಮತದಾನ ಮಾಡಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆ ಎಷ್ಟು ಮುಖ್ಯ ಅನ್ನೋದನ್ನ ನಾವು ಇಡೀ ವಿಶ್ವಕ್ಕೆ ತೋರಿಸಬೇಕಿದೆ. ಇಡೀ ಜಗತ್ತೇ ಭಾರತದಲ್ಲಿ ನಡೆಯತ್ತಿರುವ ಮತದಾನದ ಬಗ್ಗೆ ಕುತೂಹಲದ ಕಣ್ಣಿನಿಂದ ನೋಡುತ್ತಿದೆ. ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಪ್ರತಿಯೊಬ್ಬ ಯುವಕರೂ ಮತದಾನ ಮಾಡಬೇಕು. ನಿಮ್ಮಿಷ್ಟದ ಸರ್ಕಾರ ರಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯುವಕರು ತಮ್ಮ ಹಕ್ಕು ಚಲಾಯಿಸುವ ಮೂಲಕ ಮುಂದಿನ ನಿಮ್ಮ ಭವಿಷ್ಯವನ್ನ ನೀವೇ ರೂಪಿಸಿಕೊಳ್ಳಬೇಕು. ಶೇ. 100ರಷ್ಟು ಯುವ ಮತದಾರರು ನಿಮ್ಮ ಹಕ್ಕನ್ನು ಚಲಾಯಿಸಿ ಅಂತಾ ಮೋದಿ ಕರೆ ನೀಡಿದರು.

ABOUT THE AUTHOR

...view details