ಇಸ್ಲಾಮಾಬಾದ್: ಭಯೋತ್ಪಾದಕರು ಬಲೂಚಿಸ್ತಾನದ ಗವಾದಾರ್ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಫೈವ್ ಸ್ಟಾರ್ ಹೋಟೆಲ್ವೊಂದರ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ.
ಬಲೂಚಿಸ್ತಾನದಲ್ಲಿರುವ ಫೈವ್ಸ್ಟಾರ್ ಹೋಟೆಲ್ ಮೇಲೆ ಬಾಂಬ್ ದಾಳಿ - balochistan
ಬಲೂಚಿಸ್ತಾನದ ಗವಾದಾರ್ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಫೈವ್ ಸ್ಟಾರ್ ಹೋಟೆಲ್ ಮೇಲೆ ಭಯೋತ್ಪಾದಕರು ದಾಳಿ- ಭಯೋತ್ಪಾದಕರು ಮತ್ತು ಭದ್ರತಾ ಅಧಿಕಾರಿಗಳ ನಡುವೆ ಗುಂಡಿನ ಚಕಮಕಿ- ಹೋಟೆಲ್ನಲ್ಲಿದ್ದ ಅಥಿತಿಗಳ ಸ್ಥಳಾಂತರ
ಫೈವ್ಸ್ಟಾರ್ ಹೋಟೆಲ್ ಮೇಲೆ ಬಾಂಬ್ ದಾಳಿ
ಮೂವರು ಗನ್ಮಾನ್ಗಳು ಹೋಟೆಲ್ ಒಳಗೆ ನುಗ್ಗಿ ದಾಳಿ ನಡೆಸಿದ್ದಾರೆ. ಸದ್ಯ ಭಯೋತ್ಪಾದಕರು ಮತ್ತು ಭದ್ರತಾ ಅಧಿಕಾರಿಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಇನ್ನೂ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪರ್ಲ್ ಕಾಂಟಿನೆಂಟಲ್ ಹೋಟೆಲ್ನಲ್ಲಿದ್ದ ಅಥಿತಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಬಲೂಚಿಸ್ತಾನದ ಮಾಹಿತಿ ಸಚಿವ ಜಹೂರ್ ಬುಲೇದಿ ತಿಳಿಸಿದ್ದಾರೆ.
Last Updated : May 11, 2019, 8:55 PM IST