ಕರ್ನಾಟಕ

karnataka

ETV Bharat / bharat

ಶೋಪಿಯಾನ ಎನ್​ಕೌಂಟರ್ ​: ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ - undefined

ಶೋಪಿಯಾನ ಎನ್​ಕೌಂಟರ್​ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಘಟನಾ ಸ್ಥಳದಲ್ಲಿದ್ದ ರೈಫಲ್​ ಹಾಗೂ ಮದ್ದು ಗುಂಡುಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.

ಶೊಪಿಯಾನ ಎನ್​ಕೌಂಟರ್

By

Published : May 10, 2019, 10:43 AM IST

Updated : May 10, 2019, 10:57 AM IST

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ.

ಉಗ್ರ ಅವಿತಿರುವ ಮಾಹಿತಿ ತಿಳಿದ ಭದ್ರತಾ ಪಡೆಗಳು, ಪ್ರದೇಶವನ್ನು ಸುತ್ತುವರೆದು ಗುಂಡಿನ ಮಳೆಗರೆದಿವೆ. ಈ ವೇಳೆ ಆತ ಹತನಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿದ್ದ ರೈಫಲ್​ ಹಾಗೂ ಮದ್ದುಗುಂಡುಗಳನ್ನು ಸೇನೆ ವಶಕ್ಕೆ ಪಡೆದಿದೆ.

ಶೊಪಿಯಾನ ಎನ್​ಕೌಂಟರ್

ಇದೇ ಉಗ್ರ ಕಳೆದೆರಡು ದಿನಗಳ ಹಿಂದೆ ಜನಾಪೋರ ಹಾಗೂ ಶೋಪಿಯಾನ ಭಾಗಗಳಲ್ಲಿ ಪೀಪಲ್ಸ್​ ಡೆಮಾಕ್ರಟಿಕ್​ ಪಕ್ಷಕ್ಕೆ ಸೇರಿದ ಇಬ್ಬರನ್ನು ಅಪಹರಿಸಿ ಗುಂಡಿನ ದಾಳಿ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.

ಪುಲ್ವಾಮಾ ದಾಳಿ ನಂತರವೂ ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡುತ್ತಿವೆ. ಪುಲ್ವಾಮಾ ದಾಳಿ ಬಳಿಕ ಈವರೆಗೆ 42 ಉಗ್ರರನ್ನು ಹೊಡೆದುರುಳಿಸಲಾಗಿದೆ.

Last Updated : May 10, 2019, 10:57 AM IST

For All Latest Updates

TAGGED:

ABOUT THE AUTHOR

...view details