ಕರ್ನಾಟಕ

karnataka

By

Published : Oct 30, 2020, 1:28 PM IST

ETV Bharat / bharat

ಉಗ್ರರ ಅಡಗುದಾಣ ಭೇದಿಸಿದ ಭದ್ರತಾ ಪಡೆ: ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗುದಾಣವೊಂದನ್ನು ಭೇದಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

army
ಭದ್ರತಾ ಪಡೆಗಳು

ಶ್ರೀನಗರ (ಜಮ್ಮು-ಕಾಶ್ಮೀರ):ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುದಾಣವೊಂದನ್ನು ಭೇದಿಸಿ ಸ್ಫೋಟಕಗಳು, ಸ್ವಯಂಚಾಲಿತ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ 38ನೇ ರಾಷ್ಟ್ರೀಯ ರೈಫಲ್​​ನ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಗಂಭೀರ್ ಮುಘಲನ್ ಬಳಿಯ ಅರಣ್ಯ ಪ್ರದೇಶದಲ್ಲಿ ಅಡಗುದಾಣವನ್ನು ಪತ್ತೆ ಹಚ್ಚಿದ್ದಾರೆ.

ಈ ಅಡಗುದಾಣವನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆ ಎಂದು ರಜೌರಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ತಿಳಿಸಿದ್ದು, ಎರಡು ಎಕೆ-47, ಎರಡು ಮ್ಯಾಗಜೀನ್​ಗಳು, 270 ಗುಂಡುಗಳು, ಎರಡು ಚೀನಿ ನಿರ್ಮಿತ ಪಿಸ್ತೂಲ್​ಗಳು, 75 ಪಿಕಾ ಗುಂಡುಗಳು, 10 ಡಿಟೋನೇಟರ್​​ಗಳು ಹಾಗೂ ಐದರಿಂದ ಆರು ಕಿಲೋ ಗ್ರಾಂ​​ನಷ್ಟು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಲೂ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಮಂಜಕೋಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಪೂಂಚ್ ಜಿಲ್ಲೆಯ ಮೆಂದಾರ್ ತೆಹಸಿಲ್ ಬಳಿಯ ಕಾಲಾಬನ್ ಅರಣ್ಯ ಪ್ರದೇಶದಲ್ಲಿ ಅಡುಗುದಾಣವೊಂದು ಪತ್ತೆಯಾಗಿದ್ದು, ಒಂದು ಎಕೆ-56, ಮೂರು ಮ್ಯಾಗಜೀನ್​, ಎರಡು ಬೈನಾಕ್ಯುಲರ್​ಗಳು, ಒಂದು ರೇಡಿಯೋ ಸೆಟ್​, ಸೋಲಾರ್ ಚಾರ್ಜರ್​ ಮುಂತಾದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು.

ABOUT THE AUTHOR

...view details