ಕರ್ನಾಟಕ

karnataka

ETV Bharat / bharat

ಮಾನವೀಯತೆ, ಶಾಂತಿ ಮತ್ತು ಅಭಿವೃದ್ಧಿಗೆ ಭಯೋತ್ಪಾದನೆಯೇ ಸಾಮಾನ್ಯ ಶತ್ರು: ವೆಂಕಯ್ಯ ನಾಯ್ಡು

ಭಾರತದಲ್ಲಿ ರೋಟರಿ ಇಂಟರ್‌ನ್ಯಾಷನಲ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಯೋತ್ಪಾದನೆ ಮತ್ತು ಅಭಿವೃದ್ಧಿ ವಿಚಾರದ ಕುರಿತು ಮಾತನಾಡಿದ್ದಾರೆ.

Terrorism is common enemy of humanity,ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

By

Published : Feb 16, 2020, 8:58 PM IST

ಕೋಲ್ಕತ್ತಾ:ಭಯೋತ್ಪಾದನೆಯೇ ಮಾನವೀಯತೆ, ಶಾಂತಿ ಮತ್ತು ಅಭಿವೃದ್ಧಿಯ ಸಾಮಾನ್ಯ ಶತ್ರು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಭಾರತದಲ್ಲಿ ರೋಟರಿ ಇಂಟರ್‌ನ್ಯಾಷನಲ್‌ನ ಶತಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಶಾಂತಿ ಅಭಿವೃದ್ಧಿಗೆ ಪೂರ್ವಾಪೇಕ್ಷಿತವಾಗಿದೆ. ಭಯೋತ್ಪಾದನೆಯ ಭೀತಿಯನ್ನು ತಡೆಯಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ರೀತಿಯ ಭಯೋತ್ಪಾದನೆ ವಿರುದ್ಧ ಒಂದು ಬಲವಾದ ಚೌಕಟ್ಟು ರೂಪಿಸಲು ವೀಶ್ವಸಂಸ್ಥೆಯಂತಹ ವೇದಿಕೆಗಳಲ್ಲಿ ಸಹಭಾಗಿತ್ವ ಮತ್ತು ಜಾಗತಿಕ ಒಮ್ಮತವನ್ನು ಸೃಷ್ಟಿಸಬೇಕು ಎಂದು ಕರೆ ನೀಡಿದರು.

ಭಾರತವು ಶಾಂತಿ, ಸಹಬಾಳ್ವೆಯನ್ನು ನಂಬುತ್ತದೆ. ಅಲ್ಲದೆ ತನ್ನ ನೆರೆಹೊರೆಯವರೊಂದಿಗೆ ಶಾಂತಿಯಿಂದ ವರ್ತಿಸುತ್ತದೆ ಎಂದರು. ಸಮಾಜದ ಅಂಚಿನಲ್ಲಿ ಜನರಲ್ಲಿರುವ ಬಡತನ ನಿರ್ಮೂಲನೆ ಮತ್ತು ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಎನ್‌ಜಿಒಗಳು ಮುಂದಾಗಬೇಕು ಎಂದಿದ್ದಾರೆ.

ಶೇಕಡಾ 60 ಕ್ಕೂ ಹೆಚ್ಚು ಭಾರತೀಯರು ಇನ್ನೂ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವತ್ತ ಗಮನ ಹರಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಉದ್ಯೋಗಾವಕಾಶಗಳ ಕೊರತೆ ಬಲವಂತದ ವಲಸೆಗೆ ಕಾರಣವಾಗುತ್ತಿದೆ. ಈ ಗ್ರಾಮೀಣ-ನಗರ ವಿಭಜನೆಗೆ ಕಡಿವಾಣ ಹಾಕಲು ನಾವು ಗಂಭೀರವಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಕೃಷಿಯನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಆಸಕ್ತಿ ಯುವಕರಲ್ಲಿ ಕ್ಷೀಣಿಸುತ್ತಿದೆ. ಇಂತಾ ಯುವಕರಿಗೆ ರೋಟರಿಯಂತಹ ಸಂಸ್ಥೆಗಳು ತರಬೇತಿ ನೀಡುಬೇಕು ಎಂದು ಕೇಳಿಕೊಂಡರು.

ABOUT THE AUTHOR

...view details