ಕರ್ನಾಟಕ

karnataka

ETV Bharat / bharat

ನೇಪಾಳ ಗಡಿಯಲ್ಲಿ ಉದ್ವಿಗ್ನತೆ: ಎಸ್‌ಎಸ್‌ಬಿ ಯೋಧರಿಂದ ಪರಿಸ್ಥಿತಿ ನಿಯಂತ್ರಣ - ಎಸ್‌ಎಸ್‌ಬಿ ಯೋಧರಿಂದ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣ

ಭಾರತ-ನೇಪಾಳ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಸಿಬ್ಬಂದಿ ಮತ್ತು ನೇಪಾಳದ ನಾಗರಿಕರ ನಡುವೆ ಘರ್ಷಣೆ ನಡೆದಿದ್ದು, ಎಸ್‌ಎಸ್‌ಬಿ ಯೋಧರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

bborder
bborder

By

Published : Oct 8, 2020, 12:41 PM IST

ಪಿಲಿಭಿತ್ (ಉತ್ತರ ಪ್ರದೇಶ):ಜಿಲ್ಲೆಯ ಸುಂದರ್ ನಗರ ಗ್ರಾಮದ ಬಳಿ ಸಶಸ್ತ್ರ ಸೀಮಾ ಬಲ್​ನ (ಎಸ್‌ಎಸ್‌ಬಿ) 49ನೇ ಬೆಟಾಲಿಯನ್ ಸಿಬ್ಬಂದಿ ಮತ್ತು ನೇಪಾಳದ ನಾಗರಿಕರ ನಡುವೆ ಘರ್ಷಣೆ ನಡೆದಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.

ನೇಪಾಳದಿಂದ ಬರುತ್ತಿದ್ದ ಟ್ರಕ್ ಅನ್ನು ಎಸ್‌ಎಸ್‌ಬಿ ವಶಪಡಿಸಿಕೊಂಡಿದೆ ಎಂದು ಎಸ್‌ಎಸ್‌ಬಿಯ ನೌಜಲ್ಹಾ ಗಡಿ ಹೊರ ಠಾಣಾ ಉಸ್ತುವಾರಿ ಅಧಿಕಾರಿ ಉಜ್ವಾಲ್ ಸಿಂಗ್ ಹೇಳಿದ್ದಾರೆ.

24.55 ಲಕ್ಷ ಮೌಲ್ಯದ ಸೌಂದರ್ಯವರ್ಧಕಗಳನ್ನು ಟ್ರಕ್‌ನಲ್ಲಿ ತುಂಬಿಸಲಾಗಿತ್ತು. ನೌಜಲ್ಹಾ ಗ್ರಾಮದ ವಿಕ್ರಮ್ ಚಕ್ರವರ್ತಿಯನ್ನು ಕಳ್ಳಸಾಗಣೆ ಆರೋಪದಡಿ ಬಂಧಿಸಲಾಗಿದೆ.

ಬಂಡಾರ್‌ಬೋಜ್ ಗ್ರಾಮದ ನೀರಾವರಿ ಪೈಪ್‌ಲೈನ್‌ನ ಗಡಿ ಬಳಿ ನೀರು ಹರಿಯುವುದನ್ನು ವಿರೋಧಿಸಿ ಹೆಚ್ಚಿನ ಸಂಖ್ಯೆಯ ನೇಪಾಳದ ನಾಗರಿಕರು ಗಡಿಯಲ್ಲಿ ಜಮಾಯಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ನಾಗರಿಕ ಪೊಲೀಸ್ ಪಡೆಗಳನ್ನು ಕರೆಯಲಾಯಿತು.

ಭಾರತಕ್ಕೆ ಸರಕುಗಳನ್ನು ಕಳ್ಳಸಾಗಣೆ ಮಾಡಲು ಬೈಕ್‌ ಸವಾರರು ಈ ಮಾರ್ಗದಿಂದ ಸಂಚರಿಸುವುದರಿಂದ ನೀರಿನ ಹರಿವು ಹಾಗೂ ಗಡಿ ತಪಾಸಣೆ ಬ್ರೇಕ್​ ಹಾಕಿದೆ.

ABOUT THE AUTHOR

...view details