ಛಪ್ರಾ( ಬಿಹಾರ): ಬೆಂಗಾವಲಿನ 10 ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಪ್ರತಿಪಕ್ಷದ ನಾಯಕ ತೇಜಶ್ವಿ ಯಾದವ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿನ ಸರನ್ನಲ್ಲಿ ನಡೆದಿದೆ.
ತೇಜಸ್ವಿ ಯಾದವ್ ಬೆಂಗಾವಲಿನ 10 ವಾಹನಗಳು ಡಿಕ್ಕಿ.. ಸ್ವಲ್ಪದರಲ್ಲೇ ಪಾರಾದ ಪ್ರತಿಪಕ್ಷ ನಾಯಕ! - ತೇಜಶ್ವಿ ಯಾದವ್,
ಬಿಹಾರ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ರ ಬೆಂಗಾವಲಿನ 10 ವಾಹನಗಳು ಡಿಕ್ಕಿಯಾಗಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಅವರು ಪಾರಾಗಿರುವ ಘಟನೆ ಬಿಹಾರ್ನ ಛಪ್ರಾದಲ್ಲಿ ನಡೆದಿದೆ.
ಕಾರ್ಯಕರ್ತರನ್ನು ಭೇಟಿಯಾಗಲು ತೇಜಶ್ವಿ ಪಾಟ್ನಾದಿಂದ ಜಲಾಲ್‌ಪುರಕ್ಕೆ ಹೋಗುತ್ತಿದ್ದರು. ಪಾಟ್ನಾದಿಂದ ಜಲಾಲ್‌ಪುರಕ್ಕೆ ಹೋಗುವ ಸಲುವಾಗಿ ಗರ್ಖಾ ಮನ್‌ಪುರ ರಸ್ತೆಯ ಮಥಿಯಾ ಕಮಲ್‌ಪುರ ಬಳಿ ಕಾರ್ಮಿಕರ ಗುಂಪು ಇತ್ತು. ಈ ವೇಳೆ ತೇಜಶ್ವಿ ಕಾರು ನಿಲ್ಲಿಸಲು ಹೇಳಿದರು. ಹಠಾತ್ ಆಗಿ ನಿಲ್ಲಿಸಿದ್ದರಿಂದ ಬೆಂಗಾವಲಿನಲ್ಲಿ ಭಾಗಿಯಾಗಿದ್ದ ಸುಮಾರು 10 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದವು.
ಈ ಘಟನೆಯಲ್ಲಿ ಅನೇಕ ವಾಹನಗಳು ಜಖಂಗೊಂಡವು. ವಾಹನದಲ್ಲಿದ್ದ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಈ ಅಪಘಾತದಲ್ಲಿ ತೇಜಸ್ವಿ ಯಾದವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಸ್ವಲ್ಪದರಲ್ಲೇ ಪರಿಸ್ಥಿತಿ ತಿಳಿಯಾಯಿತು.