ನವದೆಹಲಿ: ವಾಯು ಮಾರ್ಗಗಳ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ಏರಸ್ಟ್ರೈಕ್ ನಡೆಸಿದ ನಂತರ ಫೆಬ್ರವರಿ 27 ರಿಂದ ದೇಶದ ವಾಯು ಮಾರ್ಗಗಳ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ನರೇಂದ್ರ ಮೋದಿ ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ.
ಈ ನಿರ್ಬಂಧದಿಂದ ಅಮೆರಿಕ ಮತ್ತು ಯುರೋಪ್ನಿಂದ ನವದೆಹಲಿಗೆ ಬರುವ ವಿಮಾನಗಳಿಗೆ ಭಾರೀ ತೊಂದರೆ ಉಂಟಾಗಿತ್ತು. ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಕೂಡ ವಾರಕ್ಕೆ ಒಂದು ಬಾರಿ ಕೌಲಾಲಂಪುರ್, ಬ್ಯಾಂಕಾಕ್ ಮತ್ತು ನವದೆಹಲಿಗೆ ಹೋಗುತ್ತಿದ್ದ ವಿಮಾನಗಳ ಹಾರಾಟವನ್ನ ನಿರ್ಬಂಧಿಸಿತ್ತು.
ಇದೀಗ ಭಾರತೀಯ ವಾಯುಸೇನೆ ಹೇರಿದ್ದ ನಿರ್ಬಂಧವನ್ನ ಹಿಂಪಡೆದಿದ್ದು, ಈ ಹಿಂದೆ ಫೆಬ್ರವರಿ27ಕ್ಕೂ ಮೊದಲಿನಂತೆ ಇದ್ದ ವಾಯು ಮಾರ್ಗಗಳ ಮೂಲಕ ವಿಮಾನಗಳು ಪ್ರಯಾಣ ಬೆಳಸಲಿವೆ.