ನವದೆಹಲಿ: ಇಂದು ದೇಶದಲ್ಲಿ ಕೊರೊನಾ ದಾಂಗುಡಿ ಇಟ್ಟ ಸುಮಾರು ಮೂರು ತಿಂಗಳ ಬಳಿಕ ದೇವಸ್ಥಾನಗಳು ತೆರೆದಿದ್ದು, ಅಂತಿಮವಾಗಿ ಭಕ್ತರಿಗೆ ದರ್ಶನ ನೀಡುತ್ತಿವೆ.
ಬರೋಬ್ಬರಿ 75 ದಿನಗಳ ಬಳಿಕ ದೇವರ ದರ್ಶನ ಭಾಗ್ಯ: ಕೇಂದ್ರದ ನಿರ್ದೇಶನದಂತೆ ಮುಂಜಾಗ್ರತೆ - ಲಾಕ್ಡೌನ್
ಲಾಕ್ಡೌನ್ ನಂತರದ ಸುಮಾರು ಮೂರು ತಿಂಗಳ ಬಳಿಕ ದೇವಸ್ಥಾನಗಳು ತೆರೆದಿದ್ದು, ಅಂತಿಮವಾಗಿ ಇಂದಿನಿಂದ ಭಕ್ತರಿಗೆ ದರ್ಶನ ಸಿಗಲಿದೆ.
ದೆಹಲಿಯ ದೇವಾಲಯಗಳು
ಸರ್ಕಾರ ದೇವಸ್ಥಾನ, ಮಸೀದಿ, ಚರ್ಚ್ಗಳ ಬಾಗಿಲು ತೆರೆಯಲು ಅವಕಾಶ ನೀಡಿದ್ದರಿಂದ ದೆಹಲಿಯ ಗಾಂಧಿ ಚೌಕ್ದಲ್ಲಿರುವ ಗೌರಿ ಶಂಕರ ದೇವಸ್ಥಾನ, ಮುಂತಾದ ದೇವಾಲಯಗಳು ಭಕ್ತರಿಗೆ ಮುಕ್ತವಾಗಿವೆ. ಭಕ್ತರು ಬೆಳ್ಳಂಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದರು.
ಇನ್ನು ದೆಹಲಿಯ ಶ್ರೀ ಬಾಂಗ್ಲಾ ಸಾಹಿಬ್ ಗುರುದ್ವಾರ್ ಕೂಡಾ ಬೆಳಗ್ಗೆ ಭಕ್ತರಿಗೆ ಮುಕ್ತವಾಯಿತು. ಭಕ್ತರು ಬೆಳಗ್ಗೆಯಿಂದಲೇ ಗುರುದ್ವಾರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.